ದೇಶದ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು - ಸಿದ್ದರಾಮಯ್ಯ

ಬೆಂಗಳೂರು[ಅ.13]: ಸಿಎಂ ಆಗಿದ್ದ ಸಮಯದಲ್ಲಿ ಆಗಾಗ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಿದ್ದು ಅವರು ಮಾಜಿಯಾಗಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ನೇತೃತ್ವ ವಹಿಸಿಕೊಂಡ ಮೇಲೆ ಈಗ ಮತ್ತೊಮ್ಮೆ ಗುಡುಗಿದ್ದಾರೆ.

ಟ್ವೀಟ್ ಮಾಡಿರುವ ಅವರು, ದೇಶದ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಮಾನ್ಯ ನರೇಂದ್ರ ಮೋದಿ ಅವರೇ, ಪ್ರಧಾನ ಸೇವಕರಾಗಿ ಜನ ಸೇವೆಯನ್ನು ಮಾಡಲಿಲ್ಲ, ಚೌಕಿದಾರರಾಗಿ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ಈಗ ರಫೇಲ್ ಬಗ್ಗೆಯಾದರೂ ಮಾತನಾಡಿ. ರಫೇಲ್'ನಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗೆಗೆ ತೋರಿದ್ದರೆ ಡಾಲರ್ ಮೌಲ್ಯ ಇಂದು ರೂ.74ರ ಗಡಿ ದಾಟುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ. 

ಹಿಂದೊಮ್ಮೆ ನಮ್ಮ ರಾಜ್ಯ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ, ಈ ರಫೇಲ್ ಡೀಲ್'ನಲ್ಲಿ ತಮಗೆಷ್ಟು ಪ್ರತಿಶತ ಕಮಿಷನ್ ಸಿಕ್ಕಿದೆ ಎಂದು ನೀವು ದೇಶದ ಜನತೆಗೆ ಉತ್ತರಿಸುವ ಸಮಯ ಬಂದಿದೆ. ನಿಮ್ಮಂತಹ ಮಹಾನ್ ಭಾಷಣಕಾರರು ಹೀಗೆ ಮೌನವಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

Scroll to load tweet…
Scroll to load tweet…
Scroll to load tweet…