‘ವಿದ್ಯುನ್ಮಾನ ಮತಯಂತ್ರಗಳನ್ನು ಬಳಸದೇ ಮತಪತ್ರ ಗಳನ್ನು ಬಳಸಿ 2019ರ ಲೋಕಸಭಾ ಚುನಾವಣೆ ನಡೆಸಿದರೆ ಬಿಜೆಪಿ ಸೋಲಲಿದೆ. ಇವಿಎಂ ಇಲ್ಲದೇ ಹೋದರೆ ಬಿಜೆಪಿ ಖಂಡಿತ ಗೆಲ್ಲಲ್ಲ’ ಎಂದು ಮಾಯಾವತಿ ಹೇಳಿದ್ದಾರೆ.

ಲಖನೌ(ಡಿ.3): ಉತ್ತರಪ್ರದೇಶದಲ್ಲಿ ಬಿಜೆಪಿ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೋತ ಪ್ರತಿಪಕ್ಷಗಳು ಮತ್ತೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ನೆಪವನ್ನು ಶುರುಮಾಡಿಕೊಂಡಿವೆ. ಧಮ್ಮಿದ್ದರೆ ಇವಿಎಂ ಇಲ್ಲದೇ ಬಿಜೆಪಿ ಚುನಾವಣೆ ಎದುರಿಸಲಿ. ಉತ್ತರಪ್ರದೇಶದ ಚುನಾವಣೆಗಳಲ್ಲಿ ಇವಿಎಂ ತಿರುಚಲ್ಪಟ್ಟಿದ್ದವು ಎಂದು ಬಿಎಸ್ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ಪ್ರದೀಪ್ ಮಾಥೂರ್ ಆರೋಪಿಸಿದ್ದಾರೆ.

‘ವಿದ್ಯುನ್ಮಾನ ಮತಯಂತ್ರಗಳನ್ನು ಬಳಸದೇ ಮತಪತ್ರ ಗಳನ್ನು ಬಳಸಿ 2019ರ ಲೋಕಸಭಾ ಚುನಾವಣೆ ನಡೆಸಿದರೆ ಬಿಜೆಪಿ ಸೋಲಲಿದೆ. ಇವಿಎಂ ಇಲ್ಲದೇ ಹೋದರೆ ಬಿಜೆಪಿ ಖಂಡಿತ ಗೆಲ್ಲಲ್ಲ’ ಎಂದು ಮಾಯಾವತಿ ಹೇಳಿದ್ದಾರೆ. ಜನಾದೇಶ ತಮ್ಮ ಪರ ಇದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಹಾಗಿದ್ದಾಗ ಇವಿಎಂ ಬದಿಗಿರಿಸಿ ಮತಪತ್ರಗಳನ್ನು ಬಳಸುವ ಹಳೆಯ ವಿಧಾನದ ಮೂಲಕ ಚುನಾವಣೆ ಎದುರಿಸಲಿ ಎಂದು ಮಾಯಾವತಿ ಸವಾಲೆಸೆದಿದ್ದಾರೆ.

ಎಸ್‌ಪಿಯ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ‘ಇವಿಎಂ ಮೂಲಕ ಮತದಾನ ನಡೆದ ಕಡೆ ಬಿಜೆಪಿ ಜಯದ ಪ್ರಮಾಣ ಪ್ರತಿಶತ 46. ಆದರೆ ಮತಪತ್ರಗಳ ಮೂಲಕ ನಡೆದ ಚುನಾವಣೆಗಳಲ್ಲಿ ಬಿಜೆಪಿ ಜಯದ ಪ್ರಮಾಣ ಪ್ರತಿಶತ 15’ ಎನ್ನುವ ಮೂಲಕ ಇವಿಎಂ ಬಳಕೆಯನ್ನು ವಿರೋಧಿಸಿದ್ದಾರೆ.