ಇದೇ ಮೊದಲ ಬಾರಿಗೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರವನ್ನ ಬಳಸಲಾಗುತ್ತಿದೆ.
ಬೆಂಗಳೂರು (.03): ಇದೇ ಮೊದಲ ಬಾರಿಗೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರವನ್ನ ಬಳಸಲಾಗುತ್ತಿದೆ.
ಕಳೆದ ತಿಂಗಳು ನಡೆದ ಪಂಚರಾಜ್ಯ ಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರವನ್ನ ಪೈಲೆಟ್ ಯೋಜನೆಯಡಿ ಆಯ್ದ ಮತಕೇಂದ್ರಗಳಲ್ಲಿ ಬಳಸಲಾಗಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಈ ಯಂತ್ರವನ್ನ ಬಳಸಲಾಗುತ್ತಿದೆ. ಮತದಾರು ವಿದ್ಯುನ್ಮಾನ ಮತಯಂತ್ರದಲ್ಲಿ ತನ್ನ ಮತಚಲಾಯಿಸಿದ ಬಳಿಕ ಸಮೀಪದಲ್ಲೇ ಇರುವ ವಿವಿಪ್ಯಾಟ್ ಯಂತ್ರದಲ್ಲಿ ಆತ ಯಾರಿಗೆ ಮತ ಚಲಾಯಿಸಿರುತ್ತಾನೋ ಆ ಅಭ್ಯರ್ಥಿಯ ಕ್ರಮಸಂಖ್ಯೆ, ಚಿಹ್ನೆ, ಮೂಡುತ್ತದೆ. ವಿವಿಪ್ಯಾಟ್ ನ ಡಿಸ್ ಪ್ಲೇ ಸ್ಕ್ರೀನ್ ಮೇಲೆ ಈ ಮಾಹಿತಿ 7 ಸೆಕೆಂಡ್ ವರೆಗೆ ಗೋಚರಿಸುತ್ತದೆ. ಬಳಿಕ ಒಂದು ಬೀಪ್ ಸೌಂಡ್ ಕೇಳಿಸುತ್ತದೆ. ಅಲ್ಲಿಗೆ ಮತದಾರ ಯಾರಿಗೆ ಮತ ಚಲಾಯಿಸಿದ ಎಂಬುದು ಆತನಿಗೂ ಖಾತ್ರಿಯಾದಂತಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಸುವರ್ಣನ್ಯೂಸ್ ಗೆ ತಿಳಿಸಿದ್ದಾರೆ.
