'370ನೇ ವಿಧಿ ಶಾಶ್ವತವಾಗಿಡಲು ನೆಹರೂ ಕೂಡಾ ಬಯಸಿರಲಿಲ್ಲ!'
370ನೇ ವಿಧಿ ಶಾಶ್ವತವಾಗಿಡಲು ನೆಹರೂ ಕೂಡಾ ಬಯಸಿರಲಿಲ್ಲ| ಬಿಜೆಪಿ ಪರ ತರೂರ್ ಬ್ಯಾಟಿಂಗ್
ನವದೆಹಲಿ[ಸೆ.06]: ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದು ಕುರಿತು ಕಾಂಗ್ರೆಸ್‌ನಲ್ಲಿ ಒಡಕಿನ ಧ್ವನಿ ಮೂಡಿರುವ ಬೆನ್ನಲ್ಲೇ, ಕಾಶ್ಮೀರಕ್ಕೆ 370ನೇ ಸೌಲಭ್ಯವನ್ನು ಶಾಶ್ವತಗೊಳಿಸುವುದು ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕೂಡಾ ಬಯಸಿರಲಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಮೂಲಕ 370ನೇ ವಿಧಿ ಹಾಗೂ 35(ಎ) ಪರಿಚ್ಛೇದ ರದ್ದುಗೊಳಿಸಿದ ಬಿಜೆಪಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ತಾವೇ ಬರೆದ ‘ದಿ ಹಿಂದು ವೇ’ ಬಿಡುಗಡೆ ಹಿನ್ನೆಲೆಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ತರೂರ್, ‘ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ರದ್ದುಗೊಳಿಸಿದ ರೀತಿ ಮಾತ್ರ ಸಂವಿಧಾನ ಉಲ್ಲಂಘನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.