ತೆಲಂಗಾಣದಲ್ಲೂ ಜೈಲುಗಳೂ ಬಾಡಿಗೆಗಿವೆ!
ಮನೆ, ಕಚೇರಿ, ಕಟ್ಟಡಗಳನ್ನು ಬಾಡಿಗೆಗೆ ನೀಡುವುದು, ಪಡೆಯುವುದು ಸಾಮಾನ್ಯ. ಆದರೆ ತೆಲಂಗಾಣ ಸರ್ಕಾರ ಜೈಲನ್ನೂ ಬಾಡಿಗೆಗೆ ನೀಡಲು ಮುಂದಾಗಿದೆ. ನಿಜ. ಭಾರತದ ಜೈಲುಗಳಲ್ಲಿ ನಿಗದಿಗಿಂತ ಹೆಚ್ಚಿನ ಕೈದಿಗಳನ್ನು ಇಡಲಾಗುತ್ತಿದೆ ಎಂಬ ಆರೋಪಗಳ ನಡುವೆ ತೆಲಂಗಾಣದಲ್ಲಿ ಇದೀಗ ಕೈದಿಗಳ ಕೊರತೆ ಎದುರಾಗಿದೆ!
ಹೈದರಾಬಾದ್(ಜು.29): ಮನೆ, ಕಚೇರಿ, ಕಟ್ಟಡಗಳನ್ನು ಬಾಡಿಗೆಗೆ ನೀಡುವುದು, ಪಡೆಯುವುದು ಸಾಮಾನ್ಯ. ಆದರೆ ತೆಲಂಗಾಣ ಸರ್ಕಾರ ಜೈಲನ್ನೂ ಬಾಡಿಗೆಗೆ ನೀಡಲು ಮುಂದಾಗಿದೆ. ನಿಜ. ಭಾರತದ ಜೈಲುಗಳಲ್ಲಿ ನಿಗದಿಗಿಂತ ಹೆಚ್ಚಿನ ಕೈದಿಗಳನ್ನು ಇಡಲಾಗುತ್ತಿದೆ ಎಂಬ ಆರೋಪಗಳ ನಡುವೆ ತೆಲಂಗಾಣದಲ್ಲಿ ಇದೀಗ ಕೈದಿಗಳ ಕೊರತೆ ಎದುರಾಗಿದೆ!
ಹೀಗಾಗಿ ಮುಂದಿನ ವರ್ಷದಿಂದ ಜೈಲು ಕೋಣೆಗಳನ್ನು ಬಾಡಿಗೆಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗೆಂದು ಇದೇನು ಅಗ್ಗದ ದರಕ್ಕೆ ಲಭ್ಯವಿಲ್ಲ. ಒಬ್ಬ ಕೈದಿಗೆ ಮಾಸಿಕ 10000 ರು.ನಂತೆ ದರದಲ್ಲಿ ಜೈಲಿನ ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುವುದು.
ಆದರೆ ಎಲ್ಲಾ ರೀತಿಯ ಕೈದಿಗಳಿಗೂ ಈ ಕೋಣೆಗಳು ಲಭ್ಯವಿಲ್ಲ. ವಿಚಾರಣಾಧೀನ ಕೈದಿಗಳು, ಗಂಭೀರ ಅಪರಾ‘ ಪ್ರಕರಣಗಳಲ್ಲಿ ಜೈಲು ಸೇರಿದವರಿಗೆ ಈ ಕೋಣೆಗಳು ಲಭ್ಯವಿರುವುದಿಲ್ಲ. ಉಳಿದ ಸಾಮಾನ್ಯ ಕೈದಿಗಳಿಗೆ ಮಾತ್ರವೇ ಈ ಕೋಣೆಗಳನ್ನು ನೀಡಲಾಗುವುದು. ಅಗತ್ಯವಿರುವ ರಾಜ್ಯಗಳ ಮುಂದಿನ ವರ್ಷದಿಂದ ಈ ಬಗ್ಗೆ ನಮ್ಮನ್ನು ಸಂಪರ್ಕಿಸಬಹುದು ಎಂದು ತೆಲಂಗಾಣ ರಾಜ್ಯದ ಬಂದೀಖಾನೆ ಇಲಾಖೆಯ ಪ್ರಧಾನ ನಿರ್ದೇಶಕ ವಿ.ಕೆ.ಸಿಂಗ್ ಹೇಳಿದ್ದಾರೆ.
ಕಾರಣ ಏನು?:
ಪ್ರಸ್ತುತ ತೆಲಂಗಾಣದಲ್ಲಿ 50 ಜೈಲು ಗಳಿದ್ದು, 6848 ಕೈದಿಗಳಿಗೆ ಸ್ಥಳಾವಕಾಶವಿದೆ. ಆದರೆ ಇದೀಗ ಅಲ್ಲಿ 6063 ಕೈದಿಗಳು ಮಾತ್ರವೇ ಇದ್ದಾರೆ. ಇನ್ನೂ ಸುಮಾರು 800 ಕೈದಿಗಳು ಉಳಿದುಕೊಳ್ಳಲು ಸ್ಥಳಾವಕಾಶವಿದೆ. ಹೀಗಾಗಿ ಹೆಚ್ಚುವರಿ ಕೋಣೆಯನ್ನು ಬಾಡಿಗೆಗೆ ನೀಡಲು ನಿ‘ರ್ರಿಸಲಾಗಿದೆ. ನಮ್ಮ ಈ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿದಲ್ಲಿ ವಾರ್ಷಿಕ 25 ಕೋಟಿ ರು. ವರಮಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.
ದುಬಾರಿ ಏಕೆ?:
ಜೈಲಿನಲ್ಲಿ ಕೈದಿಗಳಿಗೆ ಉಳಿಯಲು ಅವಕಾಶ, ಊಟ, ‘ದ್ರತೆ, ಸಂಬಂಧಿಕರ ಜೊತೆ ಮಾತುಕತೆಗೆ ಅವಕಾಶ, ಕೈದಿಗಳಿಗೆ ತರಬೇತಿ ನೀಡಲು ತಗಲುವ ವೆಚ್ಚವನ್ನು ಪರಿಗಣಿಸಿ ಪ್ರತಿ ಕೈದಿಗೆ ಮಾಸಿಕ 10000 ರು. ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಒಬ್ಬ ಕೈದಿಯ ನಿರ್ವಹಣೆಗೆ ತಗಲುವ ದೈನಂದಿನ ವೆಚ್ಚ 120 ರುಪಾಯಿ ಎಂಬ ಅಂದಾಜಿದೆ. ಅಂದರೆ ವರ್ಷಕ್ಕೆ 43000 ರುಪಾಯಿ. ನೆರೆ ರಾಜ್ಯಗಳಿಂದ ಬೇಡಿಕೆ: ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ ರಾಜ್ಯಗಳ ಜೈಲುಗಳಿಗೆ ನಿಗದಿಗಿಂತ ಹೆಚ್ಚಿನ ಕೈದಿಗಳನ್ನು ಇಡಲಾಗಿದೆ. ಹೀಗಾಗಿ ಆ ರಾಜ್ಯಗಳಿಂದ ಬೇಡಿಕೆ ಬರಬಹುದು ಎಂಬ ನಿರೀಕ್ಷೆ ಯಲ್ಲಿ ತೆಲಂಗಾಣ ರಾಜ್ಯ ಬಂದೀಖಾನೆ ಇಲಾಖೆ ಇದೆ.