Asianet Suvarna News Asianet Suvarna News

'ಬಿಎಸ್‌ವೈ ಸಿಎಂ ಆದರೂ ಗೊಂದಲ ನಿಲ್ಲದು'

ಬಿಎಸ್‌ವೈ ಸಿಎಂ ಆದರೂ ಗೊಂದಲ ನಿಲ್ಲದು: ಶ್ರೀಶೈಲ ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಸ್ವಾಮೀ

Even If bBS Yeddyurappa Becomes Chief minister karnataka Political Crisis Continues says Srisaila Jagadguru
Author
Bangalore, First Published Jul 19, 2019, 9:47 AM IST
  • Facebook
  • Twitter
  • Whatsapp

ಹಾಸನ[ಜು.19]: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದರೂ ಗೊಂದಲಗಳು ಇದ್ದೇ ಇರುತ್ತವೆ ಎಂದು ಶ್ರೀಶೈಲ ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಸ್ವಾಮೀಜಿ ಹೇಳಿ​ದ್ದಾ​ರೆ.

ಹಾಸನ ಜಿಲ್ಲೆಯ ನುಗ್ಗೇಹಳ್ಳಿಯ ಪುರ​ವರ್ಗ ಹಿರೇಮಠಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದ ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ಇದ​ರಿಂದ ರಾಜಕೀಯ ಏರುಪೇರು ಉಂಟಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಸಹ ಅವರ ಸರ್ಕಾರಕ್ಕೂ ಅನೇಕ ಗೊಂದಲಗಳು ಉಂಟಾಗಲಿವೆ. ಯಾವುದೇ ಸರ್ಕಾರ ಬಂದರೂ ರಾಜ್ಯದ ಜನರ ಹಿತಾಸಕ್ತಿಗೆ ಅನುಗುಣವಾಗಿ ಅಧಿಕಾರ ನಡೆ​ಸ​ಬೇ​ಕು ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟೇ ಅಲ್ಲದೇ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರಾಜ್ಯದ ಎಲ್ಲ ಜಲಾಶಯ ತುಂಬಲಿವೆ. ರೈತರು ಉತ್ತಮ ಫಸಲು ಪಡೆಯಲಿದ್ದಾರೆ. ಚಂದ್ರಗ್ರಹಣದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು

Follow Us:
Download App:
  • android
  • ios