ಎಸ್ಎಸ್ಎಲ್ ಸಿ ಮೌಲ್ಯಮಾಪಕರ ಸಂಭಾವನೆಯಲ್ಲಿ ಹೆಚ್ಚಳ

Evaluation Salary Increase
Highlights

ಎಸ್ಸೆಸ್ಸೆಲ್ಸಿ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಕೊಳ್ಳುವ ಅಧಿಕಾರಿಗಳು ಮತ್ತು ಶಿಕ್ಷಕರ ಸಂಭಾವನೆಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ

ಬೆಂಗಳೂರು (ಜ.12):  ಎಸ್ಸೆಸ್ಸೆಲ್ಸಿ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಕೊಳ್ಳುವ ಅಧಿಕಾರಿಗಳು ಮತ್ತು ಶಿಕ್ಷಕರ ಸಂಭಾವನೆಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇದೇ ವೇಳೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಪರೀಕ್ಷಾ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ. ಸಂಭಾವನೆ ಹೆಚ್ಚಳ ಈ ಬಾರಿಯಿಂದಲೇ ಜಾರಿಯಾಗ ಲಿದ್ದರೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಹೆಚ್ಚಳ ಆದೇಶ 2019ರ ಮಾರ್ಚ್-ಏಪ್ರಿಲ್ ಪರೀಕ್ಷೆಯಿಂದ ಅನ್ವಯ ವಾಗಲಿದೆ.

ಸಂಭಾವನೆ ಎಷ್ಟು ಹೆಚ್ಚಳ?: ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಅಧೀಕ್ಷಕರ ಒಟ್ಟಾರೆ ಸಂಭಾವನೆಯನ್ನು 5233 ರಿಂದ 6280  ರು.ಗೆ, ಉಪ ಮುಖ್ಯ ಪರೀಕ್ಷಕರ ಸಂಭಾವನೆಯನ್ನು 3933  ರು.ನಿಂದ 4720 ರು.ಗೆ ಹೆಚ್ಚಿಸಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ಜಾಗೃತ ದಳದ ಸಿಬ್ಬಂದಿಯ ದಿನದ ಸಂಭಾವನೆ 13 00 ರು.ನಿಂದ 15 00 ರು.ಗೆ ಏರಿಕೆಯಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಪ್ರತಿ ದಿನ ಸಂಭಾವನೆ 130 ರಿಂದ 156 ರು.ಗೆ, ಕೊಠಡಿ ಮೇಲ್ವಿಚಾರಕರ ಸಂಭಾವನೆ 78 ರಿಂದ 100  ರು.ಗೆ, ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಸಂಭಾವನೆಯನ್ನು 600 ರಿಂದ 700  ರು.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಸಹಾಯಕರು, ಡಿ ಗ್ರೂಪ್ ನೌಕರರು, ಕೇಂದ್ರ ಸಾದಿಲ್ವಾರರ ಸಂಭಾವನೆಯಲ್ಲೂ ಏರಿಕೆ ಮಾಡಲಾಗಿದೆ.

ಮೌಲ್ಯಮಾಪನ ದರವೂ ಹೆಚ್ಚಳ: ಮೌಲ್ಯಮಾಪನ ದರ ಕೂಡ ಹೆಚ್ಚಿಸಲಾಗಿದ್ದು, ಪ್ರಥಮ ಭಾಷೆಗೆ ಪ್ರತಿ ಪತ್ರಿಕೆ ಮೌಲ್ಯಮಾಪನಕ್ಕೆ ನೀಡಲಾಗುತ್ತಿದ್ದ 14.30 ರು. ದರವನ್ನು 17.20ರು.ಗೆ, ದ್ವಿತೀಯ/ತೃತೀಯ ಭಾಷೆ ಪತ್ರಿಕೆಗಳ ದರ ವನ್ನು 13 ರು.ನಿಂದ 15 ರು.ಗೆ, ಐಚ್ಛಿಕ ವಿಷಯಗಳ ದರ ವನ್ನು 13 .80ರು.ನಿಂದ 16 .80 ರು.ಗೆ ಹೆಚ್ಚಿಸಲಾಗಿದೆ.

ದಿನಭತ್ಯೆ: ಶಿಕ್ಷಕರ ದಿನಭತ್ಯೆ(ಬೆಂಗಳೂರು)ಯನ್ನು 429 ರು.ನಿಂದ 515  ರು.ಗೆ ಹಾಗೂ ಇತರೆ ರಾಜ್ಯದ ಇತರೆ ಸ್ಥಳಗಳ ದಿನಭತ್ಯೆಯನ್ನು 338 ರು.ನಿಂದ 406 ರು.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಸ್ಥಳೀಯ ಭತ್ಯೆ(ಬೆಂಗಳೂರು) 169 ರು.ನಿಂದ 203 ರು.ಗೆ, ಇತರೆ ಸ್ಥಳಗಳ ಸ್ಥಳೀಯ ಭತ್ಯೆ 137  ರಿಂದ 164  ರು.ಗೆ, ಕ್ಯಾಂಪ್ ಕಸ್ಟೋಡಿಯನ್ ಸಂಭಾ ವನೆ 3250 ರು.ನಿಂದ 3900 ರು.ಗೆ, ಸಹಾಯಕರ ಸಂಭಾವನೆಯನ್ನೂ ಏರಿಕೆ ಮಾಡಲಾಗಿದೆ.

loader