ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಎನ್ನುವುದು ಸಾಬೀತಾಗಿದೆ: ಈಶ್ವರಪ್ಪ

Eshwarappa Slams CM Siddaramaiah
Highlights

ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ  ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆ ಈಗ ನಿಜವಾಗಿದೆ.  ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಅವರೇ ಅದನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ  ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆ ಈಗ ನಿಜವಾಗಿದೆ.  ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಅವರೇ ಅದನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.

ಟೆನ್ ಪರ್ಸೆಂಟ್  ಸರ್ಕಾರ  ಅನ್ನೋದು ಮೊಯ್ಲಿ ಹೇಳಿಕೆಯಿಂದಲೇ ದಾಖಲೆ ಸಿಕ್ಕಂತಾಗಿದೆ. ದೇವೇಗೌಡರಿಗೆ ಟೋಪಿ ಹಾಕಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿಕೊಂಡರು. ಪ್ರತಿಪಕ್ಷದ ನಾಯಕನೂ ಆದರು. ಲಾಟರಿ ಹೊಡೆದು ಸಿಎಂ ಆಗಿದ್ದಾರೆ. ಬಿಜೆಪಿಯವರ ಸರ್ಕಾರದ ಬಗ್ಗೆ ಟೀಕೆ ಮಾಡಿದಾಗ ಸಿಎಂ ಬಳಸಬಾರದ ಪದವನ್ನು ಬಳಸಿ ಮಾತನಾಡುತ್ತಿದ್ದರು. ಈಗ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಅದೋಗತಿಗೆ ಸಿದ್ದರಾಮಯ್ಯ ಕಾರಣವಾಗುತ್ತಿದ್ದಾರೆ. 

ವೀರಪ್ಪ ಮೊಯ್ಲಿ ಅವರ ಹೇಳಿಕೆ ಬಗ್ಗೆ ತಕ್ಷಣ ಸಿಎಂ ಉತ್ತರ ಕೊಡಬೇಕು. ಮೋಯ್ಲಿ ಹೇಳಿರುವುದು ಸರಿಯಿಲ್ಲ ಎಂದರೆ ಅವರ ಮೇಲಾದರೂ ಕ್ರಮ ಕೈಗೊಳ್ಳಲಿ. ಸಿದ್ದರಾಮಯ್ಯ ಮಗ ಯತೀಂದ್ರ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ದುಡ್ಡು ಕೊಟ್ಟು ಟಿಕೆಟ್ ತರುವ ಪರಿಸ್ಥಿತಿ ಬಂದಿದೆ.

ಅಶೋಕ್ ಖೇಣಿಯನ್ನು ಕಾಂಗ್ರೆಸ್ ಸೇರಿಸಿಕೊಂಡಾಗ ಖರ್ಗೆ ಹಾಗೂ ಮೊಯ್ಲಿ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ ಎನ್ನುವುದು ಸಾಬೀತಾಗುತ್ತದೆ  ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೆಳೆಸಿದ್ದು, ಯಡಿಯೂರಪ್ಪ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಎಲ್ಲವನ್ನೂ ಕುಳಿತು ಚರ್ಚೆ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.

2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪೂಜಾರಿ ಸ್ಪರ್ಧೆಗೆ ಅಡ್ಡ ಬಂದಿದ್ದ ಹರ್ಷ ಮೊಯ್ಲಿ ಹಿರಿಯ ಕಾಂಗ್ರೆಸ್ಸಿನ ಜನಾದರ್ನ ಪೂಜಾರಿ ಬದಲು ಅಭ್ಯರ್ಥಿಯಾಗಲು ಯತ್ನಿಸಿದ್ದರು. ಐಸಿಸಿ ಪ್ರಭಾವ ಬಳಸಿ ದ.ಕನ್ನಡ  ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಯತ್ನ ಮಾಡಿದ್ದರು ಎನ್ನಲಾಗಿದೆ.

ಅಲ್ಲದೇ ಪೂಜಾರಿ ಮತ್ತು ಮೋಯ್ಲಿ ಕಿತ್ತಾಟಕ್ಕೆ ಬೇಸತ್ತು ಐಸಿಸಿ ಈ ಚುನಾವಣೆಗೆ ಜನಾರ್ದನ ಪೂಜಾರಿ , ಹರ್ಷ ಮೊಯ್ಲಿ ಮತ್ತು   ಕಚನೂರು ಮೋನು ಎನ್ನುವವರು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಹರ್ಷ ಮೊಯ್ಲಿ ನಾಮಪತ್ರ ತಿರಸ್ಕಾರವಾಗಿತ್ತು.

ನಾಮಪತ್ರದಲ್ಲಿ ಸಾಮಾಜಿಕ ಕಾರ್ಯಲರ್ತ ದು ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ ತಿರಸ್ಕಾರ ಮಾಡಲಾಗಿತ್ತು. ಬಳಿಕ ಪೂಜಾರಿ ಹಾಗೂ ಮೋನು ನಡುವೆ ನಡೆದ ಆಂತರಿಕ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ಎಂದು ಈಶ್ವರಪ್ಪ ಹೇಳಿದರು.

loader