ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡದಿದ್ದರೂ ಮಾಡಿದ್ದಾರೆಂದು ಕಾಂಗ್ರೆಸ್’ನವರು ದೂರು ಕೊಟ್ಟಿದ್ದರಾದರೂ ನ್ಯಾಯಾಲಯ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದೆ, ಎಂದು ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ (ಫೆ.28): ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪ್ರಕರಣಗಳಿಗೆ ಅಂದು ಜನ್ಮ ಕೊಟ್ಟವರು , ಈಗ ಪುನಃ ಮರುಜನ್ಮ ನೀಡುತ್ತಿರುವವರು ಕಾಂಗ್ರೆಸ್’ನವರೇ ಆಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಡೈರಿ ಹಗರಣದ ಮೂಲಕ ಬೆತ್ತಲೆ ಮಾಡಿದ್ದು ಯಡಿಯೂರಪ್ಪನವರ ವಿರುದ್ಧ ಸೇಡಿನ ರಾಜಕಾರಣ ಮುಂದುವರೆಸಿದರೇ ಪುನಃ ಬೆತ್ತಲಾಗುತ್ತಾರೆಂದು ಶಿವಮೊಗ್ಗದಲ್ಲಿ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡದಿದ್ದರೂ ಮಾಡಿದ್ದಾರೆಂದು ಕಾಂಗ್ರೆಸ್’ನವರು ದೂರು ಕೊಟ್ಟಿದ್ದರಾದರೂ ನ್ಯಾಯಾಲಯ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದೆ, ಎಂದು ಈಶ್ವರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ , ರಾಹುಲ್ ಗಾಂಧಿಗೆ ಕಾಂಗ್ರೆಸ್’ನ ಅನೇಕ ಮಂತ್ರಿಗಳು ಕಪ್ಪ ಕೊಟ್ಟಿರುವುದು ಡೈರಿಯಿಂದ ಸಾಬೀತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸಿರುವುದು ದೇಶಕ್ಕೆ ಗೊತ್ತಾಗಿದ್ದು ಸಿಎಂ ಸಿದ್ದರಾಮಯ್ಯ ಡೈರಿ ಹಗರಣದಲ್ಲಿ ತಪ್ಪೊಪ್ಪಿಕೊಂಡು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸುವುದು ಒಳ್ಳೆಯದೆಂದು ಅವರು ಹೇಳಿದ್ದಾರೆ.