ಬೆಂಗಳೂರು[ಮಾ.07]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ರಾಜಕೀಯ ಮುಕಂಡರು ಮತದಾರರನ್ನು ಓಲೈಸಲು ನಾನಾ ಯತ್ನಗಳನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ವಾಗ್ದಾಳಿಗಳೂ ಮುಂದುವರೆದಿವೆ. ಹೀಗಿರುವಾ ಕಾಂಗ್ರೆಸ್ ನಾಯಕರಾದ ಈಶ್ವರ್ ಖಂಡ್ರೆ, ಡಾ. ಜಯಮಾಲಾ ಹಾಗೂ ದಿನೆಶ್ ಗುಂಡೂರಾವ್ ಚುನಾವಣೆಯ ಕುರಿತಾಗಿ ಹೇಳಿದ್ದೇನು?

ಬಿಜೆಪಿಯವರಿಗೆ ಈ ಹೈದ್ರಾಬಾದ್ ಕರ್ನಾಟಕ ಭಾಗವು ಚುನಾವಣೆಯಲ್ಲಿ ಮಾತ್ರ ಗೋಚರಿಸುತ್ತದೆ

ಚುನಾವಣೆ ಸಂದರ್ಭದಲ್ಲಿ ಮಾತ್ರ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಆಶ್ವಾಸನೆ ಕೊಟ್ಟು ಹೋಗುವವರು. ಬಿಜೆಪಿಯವರಿಗೆ ಈ ಹೈದ್ರಾಬಾದ್ ಕರ್ನಾಟಕ ಭಾಗವು ಚುನಾವಣೆಯಲ್ಲಿ ಮಾತ್ರ ಗೋಚರಿಸುತ್ತದೆ. ಇದು ಬಿಟ್ಟರೆ ಅವರಿಗೆ ನಮ್ಮ ಹಿಂದುಳಿದ ಭಾಗದ ಬಗ್ಗೆ ಕಾಳಜಿಯೇ ಇರೋಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ ಹೈ-ಕ ಭಾಗದ ಜನರ ಶಾಶ್ವತ ಅಭಿವೃದ್ಧಿಗಾಗಿ ನಾಂದಿ ಹಾಡಿತು. ಬಿಜೆಪಿಯವರದ್ದು ಈ ಭಾಗದಲ್ಲಿ ಕೊಡುಗೆ ಶೂನ್ಯವಿದೆ. ಅವರಿಗೆ ಹೈ.ಕ. ಭಾಗದಲ್ಲಿ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ.

-ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ

'ಪೊಲಿಟಿಕಲ್' ಬೈಟ್: ಮಗಳ ಭವಿಷ್ಯಕ್ಕಿಂತ ಸಾರ್ವಜನಿಕರ ಭವಿಷ್ಯಕ್ಕೆ ಬೆಲೆ ಕೊಡ್ತೇನೆ

ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ

ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ, ಆದ್ದರಿಂದ ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ, ಒಂದು ವೇಳೆ ಪಕ್ಷ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಹೇಳಿದರೆ ಅದಕ್ಕೆ ನಾನು ತಲೆಬಾಗುತ್ತೇನೆ. ಪಕ್ಷ ನನಗೆ ಲೋಕಸಭೆಗೆ ಸ್ಪರ್ಧಿಸುವಂತೆ ಇದುವರೆಗೆ ಹೇಳಿಲ್ಲ, ಹೇಳಲಾರದು ಎಂಬ ನಂಬಿಕೆ ಇದೆ. 

-ಡಾ.ಜಯಮಾಲಾ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ

ಮೋದಿ ವಿರುದ್ಧ ಪ್ರಕರಣ ದಾಖಲಿಸಬೇಕು

ರಫೇಲ್ ಡೀಲ್ ಕುರಿತ ದಾಖಲೆಗಳು ಕಳ್ಳತನವಾಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆ ದಾಖಲೆ ಇದ್ದಿದ್ದು ನಿಜ, ಅದರಲ್ಲಿರೋದು ಸತ್ಯ ಎಂದು ಈ ಮೂಲಕ ಒಪ್ಪಿಕೊಂಡಂತಾಗಿದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ರಫೇಲ್ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿದ್ದಾರೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು

-ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ