ರಾಯಣ್ಣ ಬ್ರಿಗೇಡ್ ಈಶ್ವರಪ್ಪ ಬೆಂಬಲಿಗರು ಕಾಂಗ್ರೆಸ್’ಗೆ ಸೇರ್ಪಡೆ?

news | Thursday, February 22nd, 2018
Suvarna Web Desk
Highlights

 ರಾಹುಲ್ ಗಾಂಧಿ ಮುಂಬೈ ಕನಾ೯ಟಕ ಪ್ರವಾಸ ಹಿನ್ನೆಲೆಯಲ್ಲಿ  ಬಿಜೆಪಿಗೆ ಮತ್ತೊಂದು ಶಾಕ್ ಕಾದಿದೆ. 

ಬೆಂಗಳೂರು (ಫೆ.21):  ರಾಹುಲ್ ಗಾಂಧಿ ಮುಂಬೈ ಕನಾ೯ಟಕ ಪ್ರವಾಸ ಹಿನ್ನೆಲೆಯಲ್ಲಿ  ಬಿಜೆಪಿಗೆ ಮತ್ತೊಂದು ಶಾಕ್ ಕಾದಿದೆ. 

ರಾಯಣ್ಣ ಬ್ರಿಗೇಡ್’ನ ಕಟ್ಟಾ ಈಶ್ವರಪ್ಪನ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.  ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳಿಧರರಾವ್ ಇಂದು ಬೆಂಗಳೂರಿನಲ್ಲಿ ಅತೃಪ್ತಗೊಂಡ ಬ್ರಿಗೇಡ್ ನಾಯಕರ ಸಭೆ ಕರೆದಿದ್ದಾರೆ. 
ಸಭೆಗೆ ಬ್ರಿಗೇಡ್ ರಾಜ್ಯಾದ್ಯಕ್ಷ ವಿರುಪಾಕ್ಷಪ್ಪ, ರಾಜ್ಯ ಪ್ರಧಾನ ಕಾಯ೯ದಶಿ೯ ಕಾಶೀನಾಥ ಹುಡೇದ ಸೇರಿದಂತೆ ನಾಯಕರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಬಾಗಲಕೋಟೆಯಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ ಬ್ರಿಗೇಡ್ ಮುಖಂಡರು.

ಈಶ್ವರಪ್ಪರನ್ನ ಬಿಜೆಪಿಯಲ್ಲಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕೈ ಬಿಡಲು ಬ್ರಿಗೇಡ್ ನಾಯಕರು ನಿಧಾ೯ರ ಮಾಡಿದ್ದರು.  ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ರಾಯಣ್ಣ ಬ್ರಿಗೇಡ್ ಪ್ರಧಾನ ಕಾಯ೯ದಶಿ೯ ಕಾಶೀನಾಥ ಹುಡೇದ ಕಾಂಗ್ರೆಸ್ ಸೇಪ೯ಡೆಗೆ ನಿರ್ಧರಿಸಿದ್ದರು.  ಸಿಎಂ ಸಿದ್ದರಾಮಯ್ಯ ಅವರೊಂದಿಗೂ ಕಾಶೀನಾಥ ಹುಡೇದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಸೇರಿದಂತೆ ಉತ್ತರ ಕನಾ೯ಟಕದ ಜಿಲ್ಲೆಗಳ ಮೇಲೆ ಇದು ಪರಿಣಾಮ ಬೀರಲಿದೆ.   ದಿಢೀರ್ ಬೆಳವಣಿಗೆಯಿಂದ ಉಸ್ತುವಾರಿ ಮುರುಳೀಧರರಾವ್ ಇಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಕಾಂಗ್ರೆಸ್ ನತ್ತ ಮುಖ ಮಾಡಿದ ಬಿಜೆಪಿ ನಾಯಕರನ್ನ ತಡೆಯಲು ಯತ್ನ ನಡೆಯುತ್ತಿದೆ. 
 

Comments 0
Add Comment

  Related Posts

  Ex Mla Refuse Congress Ticket

  video | Friday, April 13th, 2018

  CM Two Constituencies Story

  video | Thursday, April 12th, 2018

  Ex Mla Refuse Congress Ticket

  video | Friday, April 13th, 2018
  Suvarna Web Desk