ಮತ್ತೆ ಬಿಜೆಪಿಗೆ ತಲೆನೋವಾಗುತ್ತಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ?

Eshvarappa Call Rayanna Brigade Meeting on june 25 th on Belagavi
Highlights

ಚುನಾವಣೆ ಮುಗಿದ ಬೆನ್ನಲ್ಲೆ  ಮಾಜಿ ಡಿಸಿಎಂ ಈಶ್ವರಪ್ಪ  ಬಾಗಲಕೋಟೆಯಲ್ಲಿ ಜೂನ್ 25 ರಂದು ಸಭೆ ಕರೆದಿದ್ದಾರೆ.  ಉತ್ತರ ಕನಾ೯ಟಕದ 4 ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಗಳ ನಾಯಕರ ಸಭೆ ಕರೆದಿದ್ದಾರೆ.  ಈಶ್ವರಪ್ಪ ಕರೆದ ಸಭೆಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಒಳಗೊಳಗೆ ಅಪಸ್ವರ ಎದ್ದಿದೆ. 

ಬಾಗಲಕೋಟೆ (ಜೂ. 23):  ಚುನಾವಣೆ ಮುಗಿದ ಬೆನ್ನಲ್ಲೆ  ಮಾಜಿ ಡಿಸಿಎಂ ಈಶ್ವರಪ್ಪ  ಬಾಗಲಕೋಟೆಯಲ್ಲಿ ಜೂನ್ 25 ರಂದು ಸಭೆ ಕರೆದಿದ್ದಾರೆ.  ಉತ್ತರ ಕನಾ೯ಟಕದ 4 ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಗಳ ನಾಯಕರ ಸಭೆ ಕರೆದಿದ್ದಾರೆ.  ಈಶ್ವರಪ್ಪ ಕರೆದ ಸಭೆಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಒಳಗೊಳಗೆ ಅಪಸ್ವರ ಎದ್ದಿದೆ. 

ಚುನಾವಣೆಯಲ್ಲಿ ಬ್ರಿಗೇಡ್’ನಲ್ಲಿದ್ದವರಿಗೆ ಟಿಕೆಟ್ ನೀಡದೇ ಇದ್ದದ್ದು,  ಅಸಮಾಧಾನಗೊಂಡು ಕಾಂಗ್ರೆಸ್ ಗೆ ಹೋಗುವವರನ್ನ ತಡೆಯದೇ ಇದ್ದದ್ದು, ಈ ಹಿಂದೆ ಬಿಜೆಪಿ ಸೂಚನೆಯಂತೆ ದೂರ ಉಳಿದಿದ್ದ ಬ್ರಿಗೇಡ್ ಈಶ್ವರಪ್ಪ ಗೆ ಮಾತ್ರ ಟಿಕೆಟ್ ನೀಡೋಕೆ ಸೀಮಿತವಾಗಿದ್ದು ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ. 

ಬಾಗಲಕೋಟೆಯಲ್ಲಿ ಜೂನ್ 25 ರಂದು ಪರಿವೀಕ್ಷಣಾ ಮಂದಿರದಲ್ಲಿ ಸಭೆ ನಡೆಯಲಿದೆ. ಇದೀಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚುರುಕುಗೊಂಡಿದೆ.  ಮತ್ತೆ ಬಿಜೆಪಿ ಗೆ ತಲೆನೋವಾಗುತ್ತಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎನ್ನುವುದು ಕುತೂಹಲ ಮೂಡಿಸಿದೆ.  
 

loader