ಇಂದು ನಡೆದ ವಿಶ್ವಾಸ ಮತ ಯಾಚನೆಯಲ್ಲಿ ---- ಪಡೆಯುವ ಮೂಲಕ ಶಶಿಕಲಾ ಆಪ್ತ ಪಳನಿಸ್ವಾಮಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ತಾನೇ ಎಮದು ಸಾಬೀತು ಪಡಿಸಿದ್ದಾರೆ.

ಚೆನ್ನೈ (ಫೆ. 18): ತಮಿಳುನಾಡು ವಿಧಾನಸಭೆ ಇಂದು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ತಮಿಳುನಾಡು ಸಿಎಂ ಆಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆಯಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ___ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಸುಭದ್ರಪಡಿಸಿಕೊಂಡಿದ್ದಾರೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಪಳನಿ ಅವರಿಗೆ ಕನಿಷ್ಠ 117 ಶಾಸಕರ ಬೆಂಬಲ ಸಾಬೀತು ಪಡಿಸಬೇಕಿತ್ತು.

ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಗಳು ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವುದಾಗಿ ಈ ಮುಂಚೆಯೇ ನಿರ್ಧರಿಸಿದ್ದುವು.

ಮಾಧ್ಯಮಗಳಿಗೆ ನಿಷೇಧ:

ವಿಶ್ವಾಸಮತ ಯಾಚನೆಯ ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ವಿಚಾರವಾಗಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು.

30 ವರ್ಷಗಳ ಬಳಿಕ ವಿಶ್ವಾಸಮತ:

ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆದದ್ದು ಕಳೆದ 30 ವರ್ಷಗಳಲ್ಲಿ ಇದೇ ಮೊದಲು. 1988, ಜನವರಿ 27ರಂದು ಜಾನಕಿ ರಾಮಚಂದ್ರನ್ ವಿಶ್ವಾಸಮತ ಎದುರಿಸಿ, ಗದ್ದಲದ ನಡುವೆ ಜಾನಕಿ ರಾಮಚಂದ್ರನ್​​ ಗೆದ್ದಿದ್ದರು. ಆದರೆ ಎರಡೇ ದಿನಗಳಲ್ಲಿ ಜಾನಕಿ ನೇತೃತ್ವದ ಸರ್ಕಾರವನ್ನು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಕೇಂದ್ರ ಸರ್ಕಾರ ವಜಾ ಮಾಡಿತ್ತು.

ಬಿಗಿ ಭದ್ರತೆ:

ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.