ಅರಣ್ಯದಲ್ಲಿ ವನ್ಯಜೀವಿ ಪರಿಪಾಲಕರಿಂದಲೇ ಮೋಜು ಮಸ್ತಿ ಮಾಡಿ ಪರಿಸರ ಮಾಲಿನ್ಯ ಮಾಡುತ್ತಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಒಂದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದಲ್ಲಿ ನಡೆದಿದೆ.

ಚಿಕ್ಕಮಗಳೂರು(ಅ.28): ಅರಣ್ಯದಲ್ಲಿ ವನ್ಯಜೀವಿ ಪರಿಪಾಲಕರಿಂದಲೇ ಮೋಜು ಮಸ್ತಿ ಮಾಡಿ ಪರಿಸರ ಮಾಲಿನ್ಯ ಮಾಡುತ್ತಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಒಂದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದಲ್ಲಿ ನಡೆದಿದೆ.

ವನ್ಯಜೀವಿ ಪರಿಪಾಲಕ ಸತೀಶ್ ಗೌಡ ಮತ್ತು ಅವರ ಸ್ನೇಹಿತರ ತಂಡ ಇತ್ತೀಚೆಗೆ ಮುತ್ತೋಡಿ ಪ್ರಕೃತಿ ಶಿಬಿರದ ಹೃದಯಭಾಗದಲ್ಲಿ ನ ಅಭಯಾರಣ್ಯದ ಸೋಮವಾಹಿನಿ ನದಿಯಲ್ಲಿ ಅಕ್ರಮವಾಗಿ ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಇನ್ನೂ ಕೈಯಲ್ಲಿ ಹೆಂಡದ ಬಾಟಲಿಗಳನ್ನು ಹಿಡಿದು ಕುಡಿಯುತ್ತ, ಕುಣಿಯುತ್ತ, ನದಿಯಲ್ಲಿ ಕುರ್ಚಿ, ಮೇಜುಗಳನ್ನು ಹಾಕಿಕೊಂಡು ಕುಳಿತು ನಿರಾತಂಕವಾಗಿ ಮದ್ಯ ಸೇವಿಸುತ್ತಿರುವ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು , ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.