ನಿಮ್ಮ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿಲ್ಲವೆಂಬುವುದನ್ನು ಖಾತರಿಪಡಿಸಿಕೊಳ್ಳಿ

ನವದೆಹಲಿ: 2014ರ ಜು.1ರಿಂದ 2015ರ ಆ.31ರ ಅವಧಿಯಲ್ಲಿ ದೇಶದ ಯಾವುದೇ ಬ್ಯಾಂಕಿನಲ್ಲಿ ನೀವು ಖಾತೆ ತೆರೆದಿದ್ದೀರಾ? ಮ್ಯೂಚುವಲ್‌ ಫಂಡ್‌ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯಲ್ಲಿ ಖಾತೆ ಆರಂಭಿಸಿದ್ದೀರಾ? ಹಾಗಿದ್ದರೆ ಖಾತೆ ಸ್ಥಗಿತಗೊಂಡಿರಬಹುದು ಪರಿಶೀಲಿಸಿ. ವಿದೇಶಿ ಖಾತೆ ತೆರಿಗೆ ಬದ್ಧತೆ ಕಾಯ್ದೆ (ಎಫ್‌ಎಟಿಸಿಎ)ಯಡಿ, ಸ್ವಯಂಘೋಷಣೆ ಮಾಡಿಕೊಳ್ಳಲು 2014 ಹಾಗೂ 2015ರ ನಡುವೆ ಖಾತೆ ಆರಂಭಿಸಿದವರಿಗೆ ಏ.30ರ ಗಡುವು ನೀಡಲಾಗಿತ್ತು. ಈ ಗಡುವಿನೊಳಗೆ ಸ್ವಯಂಘೋಷಣೆ ಮಾಡಿಕೊಳ್ಳದ ಖಾತೆಗಳನ್ನು ಬ್ಯಾಂಕುಗಳು ಸ್ಥಗಿತಗೊಳಿಸಿವೆ.

(ಸಾಂದರ್ಭಿಕ ಚಿತ್ರ)