ಕಾವೇರಿ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್'ನಲ್ಲಿ ಮೂರು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಗಳ ಸಿಂಧುತ್ವದ ತೀರ್ಪು ಇಂದು ಹೊರಬೀಳಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಸರ್ಕಾರಗಳು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದವು. ಅಕ್ಟೋಬರ್ 19ರಂದು ಅರ್ಜಿಗಳನ್ನು ಸ್ವೀಕರಿಸಬೇಕೋ ಬೇಡವೋ, ಅಂದರೆ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದಿತ್ತು. ಬಳಿಕ ಸುಪ್ರೀಂಕೋರ್ಟ್ ಸಿಂಧುತ್ವದ ಬಗೆಗಿನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇನ್ನೂ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್ಗೆ ಹೆಚ್ಚುವರಿ ಲಿಖಿತ ಅಫಿಡೆವಿಟ್ ಸಲ್ಲಿಸುವ ಸಾಧ್ಯತೆ ಇದೆ.
ನವದೆಹಲಿ(ಅ.24): ಕಾವೇರಿ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್'ನಲ್ಲಿ ಮೂರು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಗಳ ಸಿಂಧುತ್ವದ ತೀರ್ಪು ಇಂದು ಹೊರಬೀಳಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಸರ್ಕಾರಗಳು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದವು. ಅಕ್ಟೋಬರ್ 19ರಂದು ಅರ್ಜಿಗಳನ್ನು ಸ್ವೀಕರಿಸಬೇಕೋ ಬೇಡವೋ, ಅಂದರೆ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದಿತ್ತು. ಬಳಿಕ ಸುಪ್ರೀಂಕೋರ್ಟ್ ಸಿಂಧುತ್ವದ ಬಗೆಗಿನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇನ್ನೂ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್ಗೆ ಹೆಚ್ಚುವರಿ ಲಿಖಿತ ಅಫಿಡೆವಿಟ್ ಸಲ್ಲಿಸುವ ಸಾಧ್ಯತೆ ಇದೆ.
ಮತ್ತೆ ನೀರು ಬಿಡಲು ಆದೇಶಿಸಿದರೆ ಸಿಎಂ ಜೈಲಿಗೆ ಹೋಗಲು ಸಿದ್ಧರಾಗಲಿ
ಇನ್ನೂ ಅಕ್ಟೋಬರ್ 19ರಂದು ಮೇಲ್ಮನವಿ ಸಿಂಧುತ್ವದ ತೀರ್ಪು ಇಂದಿಗೆ ಕಾಯ್ದಿರಿಸಿದ ಸುಪ್ರೀಂಕೋರ್ಟ್, ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನಿತ್ಯವೂ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆಯೂ ಆದೇಶ ನೀಡಿತ್ತು. ಅದನ್ನು ಪಾಲಿಸಲಾಗುತ್ತಿದೆ. ಸುಪ್ರೀಂಕೋರ್ಟ್ ಇವತ್ತು ಕೂಡ ನೀರು ಬಿಡಲು ಆದೇಶ ನೀಡಿದರೆ ಸರ್ಕಾರ ಅದನ್ನು ಪಾಲಿಸಲು ಮುಂದಾಗಬಾರದು. ಸಿಎಂ ಸಿದ್ದರಾಮಯ್ಯ ಬಟ್ಟೆ -ಬರೆ ಕಟ್ಟಿಕೊಂಡು ಜೈಲಿಗೆ ಹೋಗಲು ಸಿದ್ಧಾವಾಗಬೇಕು ಎಂದು ರೈತ ಮುಖಂಡ, ಶಾಸಕ ಪುಟ್ಟಣ್ಣಯ್ಯ ಹೇಳಿದ್ದಾರೆ.
ಒಟ್ಟಿನಲ್ಲಿ ಕಾವೇರಿ ವಿಚಾರಣೆ ಬಂದಗಲೆಲ್ಲ ಕಾವೇರಿ ಕೊಳ್ಳದ ರೈತರ ಎದೆಯಲ್ಲಿ ಢವಢವ ಶುರುವಾಗುತ್ತೆ.. ಹೀಗಾಗೇ ಇವತ್ತಿನ ತೀರ್ಪಿನತ್ತ ರೈತರ ಚಿತ್ತ ನೆಟ್ಟಿದೆ.
