ತಮಿಳುನಾಡಿನ ತಿರುಚ್ಚಿ ಮೂಲದ ಎಂಜಿನಿಯರ್‌ ದುಬೈನಿಂದ ಜೆಟ್‌ ಏರ್‌ವೇಸ್‌ ವಿಮಾನದ ಮೂಲಕ ಬೆಂಗಳೂರು ವಿಮಾನದ ನಿಲ್ದಾಣದಲ್ಲಿ ಇಳಿದಿದ್ದ. ಶಂಕಿತನ ಪಾಸ್‌ಪೋರ್ಟ್‌ನಲ್ಲಿ ಹಿಂದು ಹೆಸರಿದ್ದು, ಆತನ ಉಡುಗೆ-ತೊಡಗೆ ಮುಸ್ಲಿಂ ವ್ಯಕ್ತಿಗಳ ರೀತಿ ಇತ್ತು.
ತಮಿಳುನಾಡಿನ ತಿರುಚ್ಚಿ ಮೂಲದ ಎಂಜಿನಿಯರ್ ದುಬೈನಿಂದ ಜೆಟ್ ಏರ್ವೇಸ್ ವಿಮಾನದ ಮೂಲಕ ಬೆಂಗಳೂರು ವಿಮಾನದ ನಿಲ್ದಾಣದಲ್ಲಿ ಇಳಿದಿದ್ದ. ಶಂಕಿತನ ಪಾಸ್ಪೋರ್ಟ್ನಲ್ಲಿ ಹಿಂದು ಹೆಸರಿದ್ದು, ಆತನ ಉಡುಗೆ-ತೊಡಗೆ ಮುಸ್ಲಿಂ ವ್ಯಕ್ತಿಗಳ ರೀತಿ ಇತ್ತು. ಹೀಗಾಗಿ ಅನುಮಾನಗೊಂಡು ಗುಪ್ತಚರ ಸಿಬ್ಬಂದಿ ಆತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಹಿಂದು ಧರ್ಮದ ಬ್ರಾಹ್ಮಣ ಸಮುದಾಯದ ವ್ಯಕ್ತಿ ಕಳೆದ ಆರು ತಿಂಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಇದರಿಂದ ಆತನ ಉಡುಗೆ-ತೊಡುಗೆ ಮುಸ್ಲಿಂರಂತೆ ಇತ್ತು. ವಿಚಾರಣೆಗೆ ಒಳಪಡಿಸಿದ ಬಳಿಕ ಸತ್ಯಾಂಶ ತಿಳಿದ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
