ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಬಿಡುಗಡೆ ಸಮಾರಂಭದ ಬಳಿಕ ಮಾತನಾಡಿದ ಟ್ರಂಪ್, ನಾವು ವ್ಯಾಪಾರಿ ನಿಯಮಾವಳಿಯನ್ನು ಅತ್ಯಂತ ಕಠಿಣವಾಗಿ ಜಾರಿ ಮಾಡಲಿದ್ದೇವೆ. ವಿದೇಶಗಳಿಂದ ಭಾರಿ ಮಟ್ಟದ ಮೋಸವಾಗುತ್ತಿದೆ. ನಾವು ನಮ್ಮ ಕಾರ್ಮಿಕರು ಮಾಡದ ಉತ್ಪನ್ನಗಳನ್ನು ಬಯಸುತ್ತೇವೆ. ನಮ್ಮ ಫ್ಯಾಕ್ಟರಿಗಳಲ್ಲಿ ನಮ್ಮ ಕಾರ್ಮಿಕರೇ ಇರಬೇಕು. ಮೇಡ್ ಇನ್ ದ ಯುಸ್ಎ ಎಂಬ ಮುದ್ರೆ ಎಲ್ಲಾ ಉತ್ಪನ್ನಗಳ ಮೇಲೆ ಇರಬೇಕು

ವಾಷಿಂಗ್ಟನ್(ಫೆ.18): ಅಮೆರಿಕದ ಉದ್ಯೋಗ ವಿದೇಶಗಳ ಪಾಲಾಗುತ್ತಿರುವುದನ್ನು ತಪ್ಪಿಸುವುದಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.

ಅಮೆರಿಕದಲ್ಲಿನ ಉದ್ಯೋಗವನ್ನು ಅಮೆರಿಕನ್ನರಿಗೆ ಮಾತ್ರ ನೀಡಬೇಕು. ಅಮೆರಿಕದವರನ್ನಷ್ಟೇ ಉದ್ಯೋಗಕ್ಕೆ ನೇಮಿಸಬೇಕು ಎಂಬುದು ತಮ್ಮ ನೀತಿಯಾಗಿದೆ. ವ್ಯಾಪಾರಿ ನೀತಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ವಿದೇಶಿ ವಂಚನೆಯನ್ನು ತಡೆಗಟ್ಟಲಾಗುವುದು ಎಂದು ಹೇಳಿದ್ದಾರೆ.

ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಬಿಡುಗಡೆ ಸಮಾರಂಭದ ಬಳಿಕ ಮಾತನಾಡಿದ ಟ್ರಂಪ್, ನಾವು ವ್ಯಾಪಾರಿ ನಿಯಮಾವಳಿಯನ್ನು ಅತ್ಯಂತ ಕಠಿಣವಾಗಿ ಜಾರಿ ಮಾಡಲಿದ್ದೇವೆ. ವಿದೇಶಗಳಿಂದ ಭಾರಿ ಮಟ್ಟದ ಮೋಸವಾಗುತ್ತಿದೆ. ನಾವು ನಮ್ಮ ಕಾರ್ಮಿಕರು ಮಾಡದ ಉತ್ಪನ್ನಗಳನ್ನು ಬಯಸುತ್ತೇವೆ. ನಮ್ಮ ಫ್ಯಾಕ್ಟರಿಗಳಲ್ಲಿ ನಮ್ಮ ಕಾರ್ಮಿಕರೇ ಇರಬೇಕು. ಮೇಡ್ ಇನ್ ದ ಯುಸ್ಎ ಎಂಬ ಮುದ್ರೆ ಎಲ್ಲಾ ಉತ್ಪನ್ನಗಳ ಮೇಲೆ ಇರಬೇಕು ಎಂದು ಹೇಳಿದ್ದಾರೆ.