ರಾಷ್ಟ್ರೀಕೃತ ಬ್ಯಾಂಕ್‌ಗಳ ರೀತಿ ಎಲ್‌ಐಸಿ ನೌಕರರಿಗೂ ಶೀಘ್ರ 2 ಮತ್ತು 4ನೇ ಶನಿವಾರ ರಜೆ?

Employees to get off on second and fourth Saturdays
Highlights

ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ರೀತಿಯಲ್ಲಿ ಶೀಘ್ರದಲ್ಲೇ ಎಲ್‌ಐಸಿ ನೌಕರರೂ ಸಹ ಪ್ರತಿ ತಿಂಗಳ ಎರಡನೇ ಮತ್ತು 4ನೇ ಶನಿವಾರ ರಜೆ ಪಡೆಯಲಿದ್ದಾರೆ.

ನವದೆಹಲಿ: ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ರೀತಿಯಲ್ಲಿ ಶೀಘ್ರದಲ್ಲೇ ಎಲ್‌ಐಸಿ ನೌಕರರೂ ಸಹ ಪ್ರತಿ ತಿಂಗಳ ಎರಡನೇ ಮತ್ತು 4ನೇ ಶನಿವಾರ ರಜೆ ಪಡೆಯಲಿದ್ದಾರೆ. ಎಲ್‌ಐಸಿ ನೌಕರರ ಹಲವು ದಿನಗಳ ಈ ಬೇಡಿಕೆಯನ್ನು ಮಾನ್ಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘ವರ್ಗಾವಣೆ ಲಿಖಿತಗಳ ಅಧಿನಿಯಮ -ನಿಗೋಷಿಯಬಲ್‌ ಇನ್‌ಸ್ಟ್ರೂಮೆಂಟ್‌ ಕಾಯ್ದೆ’ ತಿದ್ದುಪಡಿ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳ ರೀತಿಯಲ್ಲೇ ಎಲ್‌ಐಸಿ ನೌಕರರೂ ರಜೆ ಪಡೆಯಲು ಅನುವಾಗುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮೂಲಕ ಮುಂದಿನ ದಿನಗಳಲ್ಲಿ ತಿಂಗಳ ಎರಡು ಶನಿವಾರ ಎಲ್‌ಐಸಿ ಕಚೇರಿಗಳು ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಬಾಕಿ ಉಳಿದ ಶನಿವಾರಗಳಂದು ಪೂರ್ಣಾವಧಿಯಲ್ಲಿ ತೆರೆಯಲಿವೆ.

loader