ಬೆಂಗಳೂರು(ಸೆ. 13): ನಗರದಲ್ಲಿ ಉದ್ವಿಗ್ನ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಪೊಲೀಸರು ಜನರಿಗೆ ಭದ್ರತೆ ನೀಡಲ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ವಾಟ್ಸಾಪ್'ನಲ್ಲಿ ಹರಿದಾಡುತ್ತಿರುವ ಪ್ರಚೋದನಾತ್ಮಕ ಸಂದೇಶಗಳಿಗೆ ಕಿವಿಗೊಡಬೇಡಿರೆಂದು ಜನತೆಗೆ ಪೊಲೀಸರು ಮನವಿ ಮಾಡಿದ್ದಾರೆ. ತುರ್ತು ಸ್ಥಿತಿ ಉದ್ಭವಿಸಿದರೆ '100' ಡಯಲ್ ಮಾಡಲು, ಅಥವಾ ವಾಟ್ಸಾಪ್ ನಂಬರ್ '9480801000'ಗೆ ಮೆಸೇಜ್ ಕಳುಹಿಸಲು ತಿಳಿಸಿದೆ.
ಇನ್ನೊಂದೆಡೆ, ಬೆಂಗಳೂರಿನ ಏರ್'ಪೋರ್ಟ್ ಅಥಾರಿಟಿ ಕೂಡ ತುರ್ತು ಸಂಪರ್ಕ ಸಂಖ್ಯೆ 8884998888 ನೀಡಿದೆ.
