ಇನ್ನೊಂದೆಡೆ ತಮಿಳುನಾಡಿನಾದ್ಯಂತ ಹೈ ಅಲರ್ಟ್ ಮುಂದುವರೆದಿದೆಮ ನಿಷೇಧಾಜ್ಞೆಯ ಹೊರತೂ, ಜನರು ಆಸ್ಪತ್ರೆಯ ಹೊರಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

ಚೆನ್ನೈ: ಜಯಾಗೆ ಹೃದಾಯಾಘಾತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಿದ್ಯಾಸಾಗರ ರಾವ್, ಹಂಗಾಮಿ ಸಿಎಂ ಪನೀರ್'ಸೆಲ್ವಂ ನೇತೃತ್ವದಲ್ಲಿ ಅಪೊಲೋ ಆಸ್ಪತ್ರೆಯಲ್ಲೇ ತುರ್ತು ಸಚಿವ ಸಂಪುಟ ಆರಂಭವಾಗಿದೆ.

ಜಯಾ ಬಗ್ಗೆ ಆಸ್ಪತ್ರೆ ವೈದ್ಯರಿಂದ ಸ್ಪಷ್ಟ ಮಾಹಿತಿ ರಾಜ್ಯಪಾಲರು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ತುರ್ತು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ.

ಇನ್ನೊಂದೆಡೆ ತಮಿಳುನಾಡಿನಾದ್ಯಂತ ಹೈ ಅಲರ್ಟ್ ಮುಂದುವರೆದಿದೆಮ ನಿಷೇಧಾಜ್ಞೆಯ ಹೊರತೂ, ಜನರು ಆಸ್ಪತ್ರೆಯ ಹೊರಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ 9 ಅರೆಸೇನಾ ತುಕಡಿಗಳನ್ನು ಸನ್ನದ್ಧಗೊಳಿಸಲಾಗಿದೆ. ಅಗತ್ಯ ಬಿದ್ದರೆ ವಿಮಾನದ ಮೂಲಕ ಅವುಗಳನ್ನು ರವಾನಿಸುವ ಯೋಜನೆ ಇದೆ.

ಕರ್ನಾಟಕ ರಾಜ್ಯದಿಂದ ತಮಿಳುನಾಡಿಗೆ ಹೋಗುವ ಎಲ್ಲಾ ಕೆಎಸ್’ಆರ್’ಟಿಸಿ ಬಸ್ಸು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.