ಮುಂಬೈ ಮೂಲದ ಮಾರತ್‌ಹಳ್ಳಿ ನಿವಾಸಿ ಮಹೇಶ್ ಶರ್ಮಾ ದೂರು ನೀಡಿರುವ ಟೆಕ್ಕಿ. 

ಬೆಂಗಳೂರು: ಇ-ಮೇಲ್ ಮತ್ತು ಕ್ಯಾಮೆರಾ ಹ್ಯಾಕ್ ಮಾಡಿ ಖಾಸಗಿ ವಿಡಿಯೋ ಕಳವು ಮಾಡಿ ₹1.71 ಲಕ್ಷ (2,200 ಯುಎಸ್ ಡಾಲರ್) ಅನ್ನು ಬಿಟ್‌ಕಾಯಿನ್ ಮೂಲಕ ನೀಡುವಂತೆ ಬೆದರಿಕೆ ಹಾಕಿದ ಸೈಬರ್ ವಂಚಕರ ವಿರುದ್ಧ ಟೆಕ್ಕಿಯೊಬ್ಬರು ನಗರ ಪೊಲೀಸರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲದ ದೂರು ನೀಡಿದ್ದಾರೆ.

ಈ ಸಂಬಂಧ ನಗರ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಹೇಶ್, ಖಾಸಗಿ ಹಾಗೂ ಕಚೇರಿಯ ಕೆಲಸದ ನಿಮಿತ್ತ ಪ್ರತ್ಯೇಕವಾಗಿ ಎರಡು ಈ-ಮೇಲ್ ಬಳಸುತ್ತಿದ್ದರು. ಖಾಸಗಿ ಇ-ಮೇಲ್ ವಿಳಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಟೆಕ್ಕಿಯ ಖಾಸಗಿ ವಿಡಿಯೋ, ಫೋಟೋಗಳನ್ನು ಕಳುಹಿಸಿದ್ದಾನೆ. 24 ಗಂಟೆಯೊಳಗೆ 2,200 ಯುಎಸ್ ಡಾಲರ್ ಅನ್ನು ಬಿಟ್‌ಕಾಯಿನ್ ಮೂಲಕ ನೀಡಬೇಕು. ಇಲ್ಲದಿದ್ದರೆ ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಪೋರ್ನ್ ವೆಬ್‌ಸೈಟ್ ಹಾಕುವುದಾಗಿ ಬೆದರಿಸಿದ್ದಾನೆ.

ಕೆಲ ಹೊತ್ತಿನಲ್ಲೆ ಬಳಿಕ ಮತ್ತೊಂದು ಸಂದೇಶ ಕಳುಹಿಸಿದ ವ್ಯಕ್ತಿ ಪೊಲೀಸರ ಮೊರೆ ಹೋದರೆ, ಈ ವಿಡಿಯೋ ಮತ್ತು ಫೋಟೋಗಳನ್ನು ಇ-ಮೇಲ್‌ನಲ್ಲಿರುವ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಘಟನೆ ಬಗ್ಗೆ ‘ಫೇಸ್ ಬುಕ್’ ಖಾತೆಯಲ್ಲಿ ಬರೆದು ನಗರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿದ್ದರು