Asianet Suvarna News Asianet Suvarna News

ಎಲಾನ್‌ ಮಸ್ಕ್ ಕಾರು ಬಾಹ್ಯಾಕಾಶದಲ್ಲಿ ಪತ್ತೆ

ಎಲಾನ್‌ ಮಸ್ಕ್‌ ನೇತೃತ್ವದ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ ಇತ್ತೀಚೆಗೆ ಶಕ್ತಿಶಾಲಿ ರಾಕೆಟ್ ಒಂದನ್ನು ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.

Elon Musk made history launching a car into space

ವಾಷಿಂಗ್ಟನ್‌: ಎಲಾನ್‌ ಮಸ್ಕ್‌ ನೇತೃತ್ವದ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ ಇತ್ತೀಚೆಗೆ ಶಕ್ತಿಶಾಲಿ ರಾಕೆಟ್ ಒಂದನ್ನು ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.

ಇದರ ಜೊತೆಯಲ್ಲಿ ಅವರದ್ದೇ ಆದ ಟೆಸ್ಲಾ ಕಂಪನಿಯ ಕಾರೊಂದನ್ನು ಪ್ರಾಯೋಗಿಕವಾಗಿ ಹಾರಿಬಿಡಲಾಗಿತ್ತು. ಈ ಕುರಿತು ಚಿತ್ರಗಳನ್ನು ಕೂಡಾ ಮಸ್ಕ್‌ ಬಿಡುಗಡೆ ಮಾಡಿದ್ದರು. ಆದರೆ ಕೆಲವೆಡೆ, ಇದೊಂದು ಸುಳ್ಳು ಪ್ರಚಾರದ ತಂತ್ರ. ಸ್ಟುಡಿಯೋದಲ್ಲೇ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶದ ಚಿತ್ರಣ ಸೃಷ್ಟಿಮಾಡಿ ಕಾರನ್ನು ತೋರಿಸಲಾಗಿದೆ ಎಂದೆಲ್ಲಾ ಹೇಳಲಾಗಿತ್ತು.

ಆದರೆ ಈ ಊಹೆ ತಪ್ಪು. ನಿಜವಾಗಿಯೂ ಕಾರನ್ನು ಉಡ್ಡಯನ ಮಾಡಲಾಗಿದೆ ಎಂಬುದು ಇದೀಗ ಸಾಬೀತಾಗಿದೆ. ಅರಿಜೋನಾದ ಟೆನಾಗ್ರಾ ವೀಕ್ಷಣಾಲಯದ ರೊಬೊಟೀಕೃತ ಟೆಲಿಸ್ಕೋಪ್‌ನಲ್ಲಿ ವೀಕ್ಷಿಸಿದಾಗ ಆಕಾಶದಲ್ಲಿ ಕಾರು ಚಲಿಸುತ್ತಿರುವುದು ಕಂಡು ಬಂದಿದೆ.

Follow Us:
Download App:
  • android
  • ios