ರಿಯ ನಾಗರಿಕರಿಗಿರುವ ಸೌಲಭ್ಯಗಳನ್ನು ಪಡೆಯಲು ಇರುವ ವಯಸ್ಸಿನ ಮಾನದಂಡವನ್ನು ಏಕರೂಪಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ವಿಮಾನಯಾನ, ವಿಮೆ, ರಾಜ್ಯ ಸರ್ಕಾರಗಳು ಹೀಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರ ಸೌಲಭ್ಯ ಪಡೆಯಲು ಇರುವ ವಯೋಮಿತಿಯಲ್ಲಿ ವ್ಯತ್ಯಾಸಗಳಿವೆ.
ನವದೆಹಲಿ: ಹಿರಿಯ ನಾಗರಿಕರಿಗಿರುವ ಸೌಲಭ್ಯಗಳನ್ನು ಪಡೆಯಲು ಇರುವ ವಯಸ್ಸಿನ ಮಾನದಂಡವನ್ನು ಏಕರೂಪಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಿಮಾನಯಾನ, ವಿಮೆ, ರಾಜ್ಯ ಸರ್ಕಾರಗಳು ಹೀಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರ ಸೌಲಭ್ಯ ಪಡೆಯಲು ಇರುವ ವಯೋಮಿತಿಯಲ್ಲಿ ವ್ಯತ್ಯಾಸಗಳಿವೆ.
ಸರ್ಕಾರವು ರಚಿಸಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃಧ್ಧಿ ಸಮಿತಿಯು ಅಧ್ಯಯನ ನಡೆಸಿ ಸಲ್ಲಿಸಿರುವ ವರದಿಯನ್ನಾಧರಿಸಿ ಸರ್ಕಾರವು ಕ್ರಮ ಕೈಗೊಳ್ಳುವುದೆಂದು ಕೇಂದ್ರ ಸಚಿವ ವಿಜಯ್ ಸಂಪ್ಲಾ ರಾಜ್ಯಸಭೆಯಲ್ಲಿ ಪ್ರಶ್ನೆಯೊಂಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಅವರು ತಿಳಿಸಿದ್ದಾರೆ.
