ಚಿಕಿತ್ಸೆ ಕೊರತೆಯಿಂದ ಹೆಣ್ಣು ಆನೆ ಸಾವು

First Published 4, Mar 2018, 8:54 AM IST
Elephant Death at Shirasi
Highlights

ಚಿಕಿತ್ಸೆ ಕೊರತೆಯಿಂದ ಹೆಣ್ಣು ಆನೆ ಸಾವು

ಶಿರಸಿ(ಮಾ.04): ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಆನೆಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮದ ಉಳ್ಳಾಲದ ಗ್ರಾಮದಲ್ಲಿ ನಡೆದಿದೆ.

ಆನೆಯು ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಗುಂಪಿನಿಂದ ತಪ್ಪಿಸಿಕೊಂಡು ಗ್ರಾಮದ ಕಡೆ ಬಂದಿತ್ತು. ಆನೆಯ ಅನಾರೋಗ್ಯದ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳ ಗಮಕ್ಕೆ ತಂದಿದ್ದರು. ಆದರೆ  ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಯದಿಂದಾಗಿ ಆನೆ ಪ್ರಾಣಬಿಟ್ಟಿದೆ. ಆನೆ ಸಾವಿನಿಂದಾಗಿ ಉಲ್ಲಾಳ ಗ್ರಾಮಸ್ಥರಲ್ಲಿ ದುಖಃ ಮನೆ ಮಾಡಿದೆ.

loader