ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದ ಮುನೇಶ್ವರ ಕೆರೆಯಲ್ಲಿ  ವಿದ್ಯುತ್​ ಕಂಬಗಳು ಬಿದ್ದು ಕೆರೆಯಲ್ಲಿ ವಿದ್ಯುತ್​ ಪ್ರವಹಿಸುತ್ತಿದ್ದರೂ ಬೆಸ್ಕಾಂ ಯಾವುದೇ ಕ್ರಮಗೊಂಡಿಲ್ಲ. 

ಬೆಂಗಳೂರು(ಸೆ.28): ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದ ಮುನೇಶ್ವರ ಕೆರೆಯಲ್ಲಿ ವಿದ್ಯುತ್​ ಕಂಬಗಳು ಬಿದ್ದು ಕೆರೆಯಲ್ಲಿ ವಿದ್ಯುತ್​ ಪ್ರವಹಿಸುತ್ತಿದ್ದರೂ ಬೆಸ್ಕಾಂ ಯಾವುದೇ ಕ್ರಮಗೊಂಡಿಲ್ಲ. 

ಮಳೆಯಿಂದಾಗಿ ಕೆರೆ ತುಂಬಿದ್ದು ಕೆರೆ ಪಕ್ಕದಲ್ಲೇ ಇರುವ ವಿದ್ಯುತ್ ಕಂಬ ವಾಲಿಕೊಂಡಿವೆ. ಇನ್ನೂ 11ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗಳು ಕೆರೆಯ ನೀರಿಗೆ ತಾಕುತಿರುವುದರಿಂದ ನೀರಿನಲ್ಲಿ ವಿದ್ಯುತ್ ಹರಿಯುತ್ತಿದೆ. ರೈತರು ಕೆರೆಯಲ್ಲಿ ಹಸುಗಳಿಗೆ ನೀರು ಕುಡಿಸಲು ಆಗಮಿಸುತ್ತಾರೆ. ಹೀಗಾಗಿ ನೀರಿನಲ್ಲಿ ವಿದ್ಯುತ್ ಹರಿಯುತ್ತಿರುವುದರಿಂದ ಬೆಳಗಿನಿಂದ ಸಂಜೆವರೆಗೂ ಕಳೆದ 3 ದಿನಗಳಿಂದ ರೈತರ ಗುಂಪು ಕೆರೆ ಬಳಿ ಬೀಡು ಬಿಟ್ಟು ಕೆರೆಗೆ ಯಾರೂ ತೆರಳದಂತೆ ಕಾಯುತ್ತಿದ್ದಾರೆ. ಇಷ್ಟಾದರೂ ಬೆಸ್ಕಾಂ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ.