ರೈತರು  ಉತ್ಪಾದನೆ ಮಾಡಿದ  ವಿದ್ಯುತ್'ಗೆ ಸರ್ಕಾರ  ಪ್ರತೀ ಯೂನಿಟ್'ಗೆ 9.56 ಪೈಸೆ ನೀಡುವುದಾಗಿ ಹೇಳಿತ್ತು. ಆದರೆ ಸರ್ಕಾರ ಸದ್ಯ ಪ್ರತೀ ಯೂನಿಟ್'ಗೆ  ಕೇವಲ  5.40 ಪೈಸೆ ನೀಡುತ್ತಿದೆ.  ಇದರಿಂದ ರೈತರಿಗೆ ಸರ್ಕಾರವೇ ಕರೆಂಟ್ ಶಾಕ್ ನೀಡಿದಂತಾಗಿದೆ.

ಚಿಕ್ಕಬಳ್ಳಾಪುರ(ನ.28): ಚಿಕ್ಕಬಳ್ಳಾಪುರದ ರೈತರಿಗೆ ಸದ್ಯ ತೀವ್ರ ಆತಂಕ ಎದುರಾಗಿದೆ. ಇಲ್ಲಿ ಬರಗಾಲ, ಬೆಳೆದ ಬೆಳೆ ಕೈಗೆ ಬರದೇ ಕಂಗಾಲಾಗಿದ್ದ ರೈತರು ವಿದ್ಯುತ್ ಉತ್ಪಾದನೆ ಮಾಡಿ ಬದುಕುವ ದಾರಿ ಕಂಡುಕೊಂಡಿದ್ದರು.

ಅದರಂತೆ ರೈತರು ಉತ್ಪಾದನೆ ಮಾಡಿದ ವಿದ್ಯುತ್'ಗೆ ಸರ್ಕಾರ ಪ್ರತೀ ಯೂನಿಟ್'ಗೆ 9.56 ಪೈಸೆ ನೀಡುವುದಾಗಿ ಹೇಳಿತ್ತು. ಆದರೆ ಸರ್ಕಾರ ಸದ್ಯ ಪ್ರತೀ ಯೂನಿಟ್'ಗೆ ಕೇವಲ 5.40 ಪೈಸೆ ನೀಡುತ್ತಿದೆ. ಇದರಿಂದ ರೈತರಿಗೆ ಸರ್ಕಾರವೇ ಕರೆಂಟ್ ಶಾಕ್ ನೀಡಿದಂತಾಗಿದೆ. ವಿದ್ಯುತ್ ಘಟಕಗಳನ್ನು ಕೋಟ್ಯಂತರ ರೂ. ಸಾಲ ಸೂಲ ಮಾಡಿ ನಿರ್ಮಿಸಿದ್ದರಿಂದ ಬಡ್ಡಿಯೇ 60 ರಿಂದ 70 ಲಕ್ಷ ಬಡ್ಡಿ ಕಟ್ಟುವಂತೆ ಬ್ಯಾಂಕ್'ನಿಂದ ನೋಟಿಸ್ ನೀಡಲಾಗಿದೆ.

ಸರ್ಕಾರದ ಚೆಲ್ಲಾಟದಿಂದ ಇದೀಗ ರೈತರಿಗೆ ಬೀದಿಗೆ ಬೀಳುವ ಆತಂಕ ಎದುರಾಗಿದೆ. ಬದುಕಲು ದಾರಿ ಕಾಣದೇ ತಲೆ ಮೇಲೆ ಕ್ಐ ಹೊತ್ತು ಕೂರಬೇಕಾದಂತಹ ಪರಿಸ್ಥಿತಿಯು ಎದುರಾಗಿದೆ.