ಜ್ಯೋತಿಷಿಗಳು ಬೇರೆಯವರ ಭವಿಷ್ಯ ಹೇಳುವುದು ಗೊತ್ತು. ಆದರೆ ಸದ್ಯ ಚುನಾವಣಾ ಸಮಯವಾಗಿರುವ ಕಾರಣ, ಚುನಾವಣಾ ಆಯೋಗವೇ ಜ್ಯೋತಿಷ್ಯ ಹೇಳಿದೆ.

ಜ್ಯೋತಿಷಿಗಳು ಬೇರೆಯವರ ಭವಿಷ್ಯ ಹೇಳುವುದು ಗೊತ್ತು. ಆದರೆ ಸದ್ಯ ಚುನಾವಣಾ ಸಮಯವಾಗಿರುವ ಕಾರಣ, ಚುನಾವಣಾ ಆಯೋಗವೇ ಜ್ಯೋತಿಷ್ಯ ಹೇಳಿದೆ.

ನೀವು ಟೀವಿ ಅಥವಾ ಪತ್ರಿಕೆಯಲ್ಲಿ ಇಂಥ ಪಕ್ಷವೇ ಗೆಲ್ಲುತ್ತದೆ ಅಥವಾ ಇಂಥ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಹೇಳಿದರೆ ಅದು ತಪ್ಪಾಗುತ್ತದೆ.

ಯಾಕಂದ್ರೆ ಅದು ಮತದಾರರ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಗುಜರಾತ್ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಳ್ಳುವವರೆಗೂ ನೀವು ಟೀವಿ ಅಥವಾ ಪತ್ರಿಕೆಗೆ ಇಂಥ ಯಾವುದೇ

ಹೇಳಿಕೆ ನೀಡಬೇಡಿ. ಜೊತೆಗೆ ನೀವು ಕೂಡಾ ಇಂಥದ್ದನ್ನೆಲ್ಲಾ ಪ್ರಕಟಿಸಬೇಡಿ ಎಂದು ಪತ್ರಿಕೆ ಮತ್ತು ಟೀವಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.