ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ವಿಸರ್ಜನೆಗೆ ಸಿದ್ಧರಾಮಯ್ಯ ಮುಂದಾಗಿದ್ದಾರಾ? ಸಂಪುಟದ ಹಿರಿಯ ಸಚಿವರು ಮುಖ್ಯಮಂತ್ರಿಗಳಿಗೆ ವಿಸರ್ಜಿಸುವ ಸಲಹೆಯನ್ನ ನೀಡಿದ್ದಾರಾ ? ಹಾಗಾದರೆ ಸಿಎಂ ಮನಸಲ್ಲಿ ಏನಿರಬಹುದು. ಡಿಸೆಂಬರ್ ನಲ್ಲಿ ಚುನಾವಣೆಗೆ ಹೋಗ್ತಾರಾ? ಅಥವಾ ಹೋಗಲ್ಲವಾ ? ಇಲ್ಲಿದೆ ಸಂಪೂರ್ಣ ವಿವರ.
ಬೆಂಗಳೂರು(ಮೇ.25): ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ವಿಸರ್ಜನೆಗೆ ಸಿದ್ಧರಾಮಯ್ಯ ಮುಂದಾಗಿದ್ದಾರಾ? ಸಂಪುಟದ ಹಿರಿಯ ಸಚಿವರು ಮುಖ್ಯಮಂತ್ರಿಗಳಿಗೆ ವಿಸರ್ಜಿಸುವ ಸಲಹೆಯನ್ನ ನೀಡಿದ್ದಾರಾ ? ಹಾಗಾದರೆ ಸಿಎಂ ಮನಸಲ್ಲಿ ಏನಿರಬಹುದು. ಡಿಸೆಂಬರ್ ನಲ್ಲಿ ಚುನಾವಣೆಗೆ ಹೋಗ್ತಾರಾ? ಅಥವಾ ಹೋಗಲ್ಲವಾ ? ಇಲ್ಲಿದೆ ಸಂಪೂರ್ಣ ವಿವರ.
ಡಿಸೆಂಬರ್'ನಲ್ಲಿ ಅಸೆಂಬ್ಲಿ ಎಲೆಕ್ಷನ್?: ಅವಧಿಪೂರ್ವ ಚುನಾವಣೆಗೆ ಕಾಂಗ್ರೆಸ್ ಚಿಂತನೆ
ಮುಂಬರುವ ಅಸೆಂಬ್ಲಿ ಎಲೆಕ್ಷನ್'ನಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಏರುವ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಇದಕ್ಕಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ಶುರು ಮಾಡಿದೆ. ಹಾಗಾದ್ರೆ ಯಾವ ಸಮಯದಲ್ಲಿ ಚುನಾವಣೆಗೆ ಹೋದ್ರೆ ಪಕ್ಷಕ್ಕೆ ಅನುಕೂಲವಾಗುತ್ತೆ ಅನ್ನೋ ಪ್ರಶ್ನೆ ಕೂಡ ಸಿದ್ರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ. ಸಂಪುಟದ ಹಿರಿಯ ಸಚಿವರು ಡಿಸೆಂಬರ್ ತಿಂಗಳಲ್ಲಿ ಚುನಾವಣೆಗೆ ಹೋದ್ರೆ ಪಕ್ಷಕ್ಕೆ ಹೆಚ್ಚು ಅನುಕೂಲ ಆಗುತ್ತೆ. ಹೀಗಾಗಿ, ಡಿಸೆಂಬರ್'ನಲ್ಲಿ ವಿಧಾನಸಭೇನ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಉತ್ತಮ ಎನ್ನುವ ಸಲಹೆಯನ್ನು ನೀಡಿದ್ದಾರಂತೆ.
ಡಿಸೆಂಬರ್'ನಲ್ಲೇ ಚುನಾವಣೆಗೆ ಯಾಕೆ ಹೋಗಬೇಕು ಮತ್ತು ಹೋದರೆ ಕಾಂಗ್ರೆಸ್ ಹೇಗೆ ಗೆಲ್ಲುತ್ತದೆ ಎನ್ನುವುದರ ಬಗ್ಗೆಯೂ ಹಿರಿಯ ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ.
ಡಿಸೆಂಬರ್ ಸೂಕ್ತ ಏಕೆ?
ಗುಜರಾತಿನ ವಿಧಾನಸಭೆ ಚುನಾವಣೆ ಡಿಸೆಂಬರ್'ನಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಷಾ ತಮ್ಮ ಗಮನವನ್ನ ಗುಜರಾತ್ ಚುನಾವಣೆಯತ್ತ ಕೇಂದ್ರಿಕರಿಸಿರುತ್ತಾರೆ. ಜೊತೆಗೆ ಕರ್ನಾಟಕದ ಬಗ್ಗೆ ಅಷ್ಟೇನೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲಾರರು. ಆದರಿಂದ ಡಿಸೆಂಬರ್ ತಿಂಗಳಲ್ಲಿ ಎಲೆಕ್ಷನ್'ಗೆ ಬೆಸ್ಟ್ ಎನ್ನುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಮನಸಿನಲ್ಲಿ ಏನಿದೆ?
ಆದರೆ, ಡಿಸೆಂಬರ್'ನಲ್ಲಿ ವಿಧಾನಸಭೆ ವಿಸರ್ಜಿಸುವ ಮನಸ್ಸು ಸಿಎಂ ಸಿದ್ದರಾಮಯ್ಯಗೆ ಇಲ್ಲ ಎನ್ನಲಾಗಿದೆ. ಯಾಕಂದ್ರೆ ಮುಂದಿನ ವರ್ಷ ಜನಪ್ರಿಯ ಬಜೆಟ್ ಮಂಡಿಸಿ, ಆ ಬಜೆಟ್ ಯೋಜನೆಗಳನ್ನಿಟ್ಟುಕೊಂಡೇ ಚುನಾವಣೆ ಎದುರಿಸಬೇಕು, ಜನರ ಬಳಿ ತೆರಳಿ ಮತ ಕೇಳಬೇಕು ಎನ್ನುವುದು ಸಿದ್ದರಾಮಯ್ಯ ಪ್ಲಾನ್ ಆಗಿದೆ.
ಜೊತೆಗೆ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸಬೇಕೆನ್ನುವ ಮಹದಾಸೆ ಸಿದ್ದರಾಮಯ್ಯ ಅವರದ್ದಾಗಿದೆ. ಯಾಕಂದ್ರೆ ದೇವರಾಜ ಅರಸುರನ್ನು ಹೊರತುಪಡಿಸಿದರೆ, ಯಾವೊಬ್ಬ ಕಾಂಗ್ರೆಸ್ ಮುಖ್ಯಮಂತ್ರಿಯೂ ಐದು ವರ್ಷ ಪೂರೈಸಿಲ್ಲ. ಹೀಗಾಗಿ ಅವಧಿಗೂ ಮುನ್ನವೇ ಅಸೆಂಬ್ಲಿ ವಿಸರ್ಜಿಸಿ ಎಲೆಕ್ಷನ್ ಎದುರಿಸುವುದು ಬೇಡ ಎನ್ನುವ ಸಿದ್ರಾಮಯ್ಯ ಅವರ ವಾದ. ಹೀಗಾಗಿ ಹಿರಿಯ ಸಚಿವರ ಸಲಹೆಯನ್ನು ಮುಖ್ಯಮಂತ್ರಿಗಳು ಒಪ್ಪಲು ತಯಾರಿಲ್ಲ ಎನ್ನುವ ಮಾತುಗಳು ಕಾಂಗ್ರೆಸ್ ಚಾವಡಿಯಿಂದ ಕೇಳಿ ಬರುತ್ತಿವೆ.
