ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿರುವುದು ಪ್ರಧಾನಿ ನರೇಂದ್ರ ಪ್ರಬಲ ವ್ಯಕ್ತಿ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ನವದೆಹಲಿ (ಮಾ.11): ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿರುವುದು ಪ್ರಧಾನಿ ನರೇಂದ್ರ ಪ್ರಬಲ ವ್ಯಕ್ತಿ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಸಂಸತ್ತಿನ ಮೇಲ್ಮನೆಯಲ್ಲಿ ಚುನಾವಣೆ ನಡೆದರೂ ಭಾರತೀಯ ಜನತಾ ಪಕ್ಷ ಬಹುಮತ ಪಡೆಯಲಿದೆ ಎಂದು ಹೇಳಿದ್ದಾರೆ.

ಡಿಮಾನಿಟೈಸೇಶನ್ ನ ವಾಸ್ತವ ಜನಾಭಿಪ್ರಾಯ ಇದಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಶಿಸಿದ್ದಾರೆ. ಆದರೆ ಇದನ್ನು ಚಿದಂಬರಂ ನಿರಾಕರಿಸಿದ್ದಾರೆ. ಉತ್ತರ ಪ್ರದೇಶ ಮತಗಳು ಡಿಮಾನಿಟೈಸೇಶನ್ ಪರವಾಗಿದೆ ಎಂದು ನಾವು ಸರಳೀಕೃತಗೊಳಿಸಲು ಸಾಧ್ಯವಾಗುವುದಿಲ್ಲ. ಇದನ್ನು ಜನಾಭಿಪ್ರಾಯ ಎಂದು ಒಪ್ಪಲಾಗುವುದಿಲ್ಲ ಎಂದು ಹೇಳಿದ್ದಾರೆ.