ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಎಡವಟ್ಟು: 2014 ರ ಚುನಾವಣಾ ಪೋಸ್ಟರ್ ಹಾಕಿದ ಅಧಿಕಾರಿಗಳು

First Published 8, Apr 2018, 12:05 PM IST
Election Officers Mistake
Highlights

ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 

ಚಾಮರಾಜನಗರ (ಏ. 08): ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 

ಮತದಾನ ಜಾಗೃತಿ ಮೂಡಿಸವ ಅವಸರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಪೋಸ್ಟರನ್ನು ಅಧಿಕಾರಿಗಳು  ಅಂಟಿಸಿದ್ದಾರೆ.  2014 ರಲ್ಲಿ ಲೋಕಸಭಾ ಚುನಾವಣೆಯ ಅಂಬಾಸಿಡರ್ ಆಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಫೋಟೋ ಇರುವ ಫ್ಲೆಕ್ಸನ್ನು ಅಳವಡಿಕೆ ಮಾಡಿದ್ದಾರೆ.   ಈ ಬಾರಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಚುನಾವಣಾ ಅಂಬಾಸಿಡರ್ ಆಗಿದ್ದಾರೆ. ರಾಹುಲ್ ದ್ರಾವಿಡ್ ಬದಲು ಅಬ್ದುಲ್ ಕಲಾಂ ಫೋಟೋ ಹಾಕಿದ್ದಾರೆ. 

ಚಾಮರಾಜನಗರ ಪಟ್ಟಣದ ಹೃದಯ ಭಾಗವಾದ ಭುವನೇಶ್ವರಿ ವೃತ್ತದಲ್ಲಿ  ಪೋಸ್ಟರ್ ಅಳವಡಿಕೆ ಮಾಡಿದ್ದಾರೆ. 

loader