ಯಾವಾಗ ನಡೆಯುತ್ತೆ ಕರ್ನಾಟಕ ಎಲೆಕ್ಷನ್ : ಚುನಾವಣಾ ಆಯುಕ್ತರು ಹೇಳಿದ್ದೇನು..?

news | Thursday, February 1st, 2018
Suvarna Web Desk
Highlights

ವಿಕಾಸ ಸೌಧದಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಓಂ ಪ್ರಕಾಶ್ ರಾವತ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ 2 ದಿನಗಳಿಂದ ಸಭೆ ನಡೆಸಿದ್ದು, ಹಾಲಿ ವಿಧಾನ ಸಭಾ ಅವಧಿ ಮೇ 29ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ಇನ್ನು  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ  ಸಿದ್ಧತೆ ಪರಿಶೀಲನೆ ನಡೆಸಿದ್ದು, ಬೆಳಗ್ಗೆಯಿಂದ ಜಿಲ್ಲಾವಾರು ಸಿದ್ಧತಾ ಸಭೆ ನಡೆಸಿದ್ದಾಗಿ ಹೇಳಿದ್ದಾರೆ.

ಬೆಂಗಳೂರು : ವಿಕಾಸ ಸೌಧದಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಓಂ ಪ್ರಕಾಶ್ ರಾವತ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ 2 ದಿನಗಳಿಂದ ಸಭೆ ನಡೆಸಿದ್ದು, ಹಾಲಿ ವಿಧಾನ ಸಭಾ ಅವಧಿ ಮೇ 29ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ಇನ್ನು  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ  ಸಿದ್ಧತೆ ಪರಿಶೀಲನೆ ನಡೆಸಿದ್ದು, ಬೆಳಗ್ಗೆಯಿಂದ ಜಿಲ್ಲಾವಾರು ಸಿದ್ಧತಾ ಸಭೆ ನಡೆಸಿದ್ದಾಗಿ ಹೇಳಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಸೇರಿದಂತೆ  ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾಗಿ ಹೇಳಿದ್ದಾರೆ. ಮಹದಾಯಿ ಪ್ರತಿಭಟನೆ, ಕಾವೇರಿ ತೀರ್ಪು ಹೊರಬೀಳುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಮಾಲೋಚನೆ ನಡೆಸಿದ್ದಾಗಿ ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ದಾಖಲಾಗುವ ಪ್ರಕರಣಗಳ  ಶೀಘ್ರ ತನಿಖೆ ನಡೆಸುವ ಬಗ್ಗೆಯೂ ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಕೆಲ ಪಕ್ಷಗಳು ಈಗಿರುವ ಸರ್ಕಾರ ಹೊಸ ಯೋಜನೆ ಘೋಷಣೆ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿವೆ. ಕೆಲ ಪಕ್ಷಗಳು ಇವಿಎಂ ಬಗ್ಗೆ ಪ್ರಶ್ನೆ ಎತ್ತಿವೆ.

ಇನ್ನು ಕೆಲವು ಪಕ್ಷಗಳು ಆಧಾರ್ ಕಾರ್ಡ್ ಜೊತೆ ಓಟರ್ ಐಡಿ ಲಿಂಕ್ ಮಾಡಲು ಕೂಡ ಮನವಿ ಮಾಡಿವೆ. ಇನ್ನು ಷಾಮಿಯಾನ ಪೆಂಡಾಲ್ ಹಾಕದಂತೆಯೂ ಕೂಡ ಮನವಿ ಮಾಡಿದ್ದು, ಇದರ ವೆಚ್ಚವನ್ನು  ಚುನಾವಣಾ ವೆಚ್ಚದಡಿ ಪರಿಗಣಿಸಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಒಂದೇ ಫೇಸ್’ಲ್ಲಿ ಚುನಾವಣೆ ನಡೆಸಲು ಮನವಿ ಮಾಡಿದ್ದು, ಕೆಲ ರಾಜಕಾರಣಿಗಳೂ ಕೂಡ ಹೀಗೆ ಮನವಿ ಮಾಡಿದ್ದಾರೆ. ಚುನಾವಣೆ ವೇಳೆ ಇವಿಎಂ ಜೊತೆ ವಿವಿ ಪ್ಯಾಡ್ಗಳು ಇರಲಿವೆ. ಚುನಾವಣೆ ವೇಳೆ ಭದ್ರತೆಗಾಗಿ ಸಿಆರ್ಪಿಎಫ್ ಪೊಲೀಸರನ್ನು ಹೆಚ್ಚುವರಿಯಾಗಿ ನೇಮಿಸಲಾಗುತ್ತದೆ. ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ.

ಪೊಲೀಸ್ ಚೆಕ್ ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್’ಗಳನ್ನು ಬಳಸುವುದಾಗಿ ಹೇಳಿದ್ದಾರೆ. ಮಾಧ್ಯಮ ಜಾಹಿರಾತಿನ ಪರಿಶೀಲನೆಯನ್ನೂ ಮಾಡಲಾಗುತ್ತದೆ. ಪೇಯ್ಡ್ ನ್ಯೂಸ್ ಮೇಲೆ ಕಣ್ಣಿಡಲಾಗುತ್ತದೆ ಎಂದಿದ್ದಾರೆ. ರಾಜ್ಯದಲ್ಲಿ 2.48 ಕೋಟಿ ಪುರುಷರು, 2.41 ಕೋಟಿ ಮಹಿಳೆಯರು ಹಾಘೂ 4340 ತೃತೀಯ ಲಿಂಗಿಗಳು ಇದ್ದಾರೆ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರ ಪ್ರಸ್ತಾಪ : ಇದೇ ವೇಳೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಹಾಸನ ಡಿಸಿ ವರ್ಗಾವಣೆ ವಿಚಾರ ಆಯೋಗದ ಗಮನಕ್ಕೆ ಬಂದಿದ್ದು, ಇದು ಪ್ರೀ ಮೆಚ್ಯೂರ್ ಎಂಬು ಆಯೋಗದ ಗಮನಕ್ಕೆ ಬಂದಿದೆ. ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಅಧಿಕಾರಿ ವರ್ಗಾವಣೆ ಮಾಡದಂತೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk