ನವದೆಹಲಿ, [ಜ.28]: 2019ರ ಲೋಕಸಭಾ ಚುನಾವನಾ ವೇಳಾ ಪಟ್ಟಿಗಾಗಿ ರಾಜಕೀಯ ಪಕ್ಷಗಳು ಬಕ ಪಕ್ಷಿಗಳಂತೆ ಕಾಯುತ್ತಿವೆ. ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಚುನಾವಣಾ ವೇಳಾ ಪಟ್ಟಿಗಾಗಿ ಎದುರು ನೋಡುತ್ತಿವೆ.

ಕೇವಲ ರಾಜಕೀಯ ಪಕ್ಷಗಲು ಮಾತ್ರವಲ್ಲದೇ ಕೇಂದ್ರ ಚುನಾವಣಾ ಆಯೋಗವು ಸಹ ಎಲೆಕ್ಷನ್ ಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಇದಕ್ಕೆ ಪೂರಕವೆಂಬಂತೆ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಚುನಾವಣಾಧಿಕಾರಿಗಳಿಗೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತಾಗಿ ಪತ್ರ ಬರೆದಿದೆ. 

ಸಿದ್ಧರಾಗಿ: ಮಾರ್ಚ್ ನಲ್ಲಿ ‘ಲೋಕ’ಸಮರಕ್ಕೆ ದಿನಾಂಕ ಪ್ರಕಟ ಸಾಧ್ಯತೆ!

ಚುನಾವಣಾ ಆಯೋಗದ ಈ ಪತ್ರದಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯ ವಿಧಾನಸಭಾ ಚುನಾವಣೆಗಳ ಬಗ್ಗೆ ಉಲ್ಲೇಖವಿದೆ. 

ಈ ರಾಜ್ಯಗಳ ವಿಧಾನಸಭಾ ಚುನಾವಣೆ ಈ ವರ್ಷವೇ ನಡೆಯಲಿಕ್ಕಿದೆ. ಇನ್ನು ಲೋಕಸಭೆಯ ಅವಧಿ ಜೂನ್‌ 3ರಂದು ಕೊನೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಈ ರಾಜ್ಯಗಳ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ನಡೆಸುವ ಬಗ್ಗೆ ಸೇರಿದಂತೆ ಇತರೆ ಮಾಹಿತಿಗಾಗಿ ಪತ್ರ ಬರೆದಿದೆ.

ಚುನಾವಣಾ ಪ್ರಕ್ರಿಯೆ: ದೇಶದಲ್ಲಿ ಕರ್ನಾಟಕವೇ ಬೆಸ್ಟ್

ಸಿದ್ಧತೆಗಳನ್ನು ನೋಡಿದ್ರೆ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ. 2014ರ ಲೋಕಸಭಾ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಆ ವರ್ಷ ಮಾರ್ಚ್‌ 5ರಂದು ಪ್ರಕಟಿಸಿತ್ತು.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಒಟ್ಟು 9 ಹಂತಗಳಲ್ಲಿ ಲೋಕಸಭಾ ಚುನವಾಣೆಯನ್ನು ನಡೆಸಿತ್ತು. ಆದ್ರೆ ಈ ಬಾರಿಯ ಲೋಕಸಭಾ ಚುನಾವಣೆ ವೇಳಾ ಪಟ್ಟಿಯಲ್ಲಿ ಏನೆಲ್ಲ ಬದಲಾವಣೆಗಲಾಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.