ನವದೆಹಲಿ (ಏ. 01): ಹಿಂದೂಗಳು ಬಹುಸಂಖ್ಯಾತರಿರುವ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಪ್ರತಿ ಪಕ್ಷಕ್ಕೆ ಹೆದರಿಕೆಯಿದೆ ಎಂದು ಟೀಕಿಸಿದ್ದ ಮೋದಿ ಅವರ ಹೇಳಿಕೆಯು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದು ಅಮೇಠಿ ಜೊತೆಗೆ ಮುಸ್ಲಿಂ ಬಾಹುಳ್ಯವಿರುವ ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸಿದ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಮೋದಿ ಈ ಟೀಕೆ ಮಾಡಿದ್ದರು ಎನ್ನಲಾಗಿತ್ತು. ಮಹಾರಾಷ್ಟ್ರದ ವಾರ್ದಾದಲ್ಲಿ ಚುನಾವಣಾ ರ‌್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ಅವರು ಈ ಟೀಕೆ ಮಾಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಆಯೋಗದ ಮೊರೆ ಹೋಗಿತ್ತು.