ಮತದಾನ ಪ್ರಮಾಣ ಏರಿಕೆಗಾಗಿ ಚುನಾವಣಾ ಅಧಿಕಾರಿಗಳು ವಿಶೇಷ ಆಫರ್ ನೀಡಿದ್ದಾರೆ.  ರಾಜಧಾನಿಯ ಮಾಲ್,  ಮಳಿಗೆಗಳಲ್ಲಿ  ವಿಶೇಷ ರಿಯಾಯಿತಿ ನೀಡಿ ಮತದಾರರನ್ನು ಸೆಳೆಯಲಾಗುತ್ತಿದೆ.  

ಬೆಂಗಳೂರು (ಮಾ. 29): ಮತದಾನ ಪ್ರಮಾಣ ಏರಿಕೆಗಾಗಿ ಚುನಾವಣಾ ಅಧಿಕಾರಿಗಳು ವಿಶೇಷ ಆಫರ್ ನೀಡಿದ್ದಾರೆ. ರಾಜಧಾನಿಯ ಮಾಲ್, ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ನೀಡಿ ಮತದಾರರನ್ನು ಸೆಳೆಯಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತದಾನ ಮಾಡಿದ ಗ್ರಾಹಕರು ಇಂಕಿನ ಗುರುತು ತೋರಿಸಬೇಕು. ಅ ಸಂದರ್ಭದಲ್ಲಿ ಖರೀದಿಯ ಪ್ರಮಾಣದಲ್ಲಿ 5-10 % ರಿಯಾಯತಿ ನೀಡಲಾಗುತ್ತೆ. ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ಮಾಲ್ , ಮಳಿಗೆ ಮಾಲೀಕರ ಜತೆ ಒಂದು ಸುತ್ತಿನ‌ ಮಾತುಕತೆ ಪೂರ್ಣಗೊಂಡಿದೆ. ನಾಳೆ ಅಂತಿಮ ಸಭೆ ನಡೆಯಲಿದೆ. ಮತದಾನ ಪ್ರಮಾಣ ಏರಿಕೆಗೆ ರಾಜ್ಯ ಚುನಾವಣಾ ಅಯೋಗದಿಂದ ಈ ಆಫರ್ ನೀಡುತ್ತಿದೆ. ನಾಳೆ ಚುನಾವಣಾಧಿಕಾರಿ ಹಾಗೂ ಮಾಲೀಕರ ಸಭೆಯಲ್ಲಿ ಅಧಿಕೃತ ಘೋಷಣೆಯಾಗಲಿದೆ.