ಒಂದು ದೇಶ, ಒಂದೇ ಚುನಾವಣೆ; ತೊಂದರೆ ಪಟ್ಟಿ ಮಾಡಲು ಸೂಚನೆ

Election Commission Law Commission to Meet on May 16 to Discuss One Nation One Poll
Highlights

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಜೊತೆಯಾಗಿ ನಡೆಸುವ ಪ್ರಸ್ತಾಪ ಇತ್ತೀಚೆಗೆ ಚರ್ಚೆಯಲ್ಲಿದೆ.

ನವದೆಹಲಿ(ಮೇ.17]: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಇರುವ ವ್ಯಾವಹಾರಿಕ ತೊಂದರೆಗಳನ್ನು ಪಟ್ಟಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಕಾನೂನು ಆಯೋಗ ಸೂಚಿಸಿದೆ. ಅಲ್ಲದೆ, ಈ ಸಂಬಂಧದ ಕಾನೂನು ಚೌಕಟ್ಟು ಕುರಿತ ಪ್ರಸ್ತಾಪದ ಬಗ್ಗೆ ನಿಲುವುಗಳನ್ನು ವ್ಯಕ್ತಪಡಿಸುವಂತೆಯೂ ಕೋರಲಾಗಿದೆ.

ಎರಡೂ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರ ಬಗ್ಗೆ ಮುಖ್ಯಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರುಗಳ ಜೊತೆ ಕಾನೂನು ಆಯೋಗದ ಹಿರಿಯ ಸಿಬ್ಬಂದಿ ಬುಧವಾರ ಸಭೆ ನಡೆಸಿ, ವ್ಯಾಪಕ ಚರ್ಚೆ ನಡೆಸಿದರು. ಹಣಕಾಸು, ಭದ್ರತೆ, ಚುನಾವಣಾ ಸಿಬ್ಬಂದಿ, ಇವಿಎಂಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿ ಇರುವ ಪ್ರಾಯೋಗಿಕ ತೊಂದರೆಯ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಕಾನೂನು ಆಯೋಗ ಕೋರಿದೆ. 

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಜೊತೆಯಾಗಿ ನಡೆಸುವ ಪ್ರಸ್ತಾಪ ಇತ್ತೀಚೆಗೆ ಚರ್ಚೆಯಲ್ಲಿದೆ.

loader