ಬೈ ಎಲೆಕ್ಷನ್‌ಗೆ ಹೊಸ ಡೇಟ್ ಫಿಕ್ಸ್: ಅನರ್ಹ ಶಾಸಕರಿಗೆ ಮತ್ತೆ ಟೆನ್ಷನ್ ಶುರು

ರಾಜ್ಯದ  ಅನರ್ಹ ಶಾಸಕರ  ಕ್ಷೇತ್ರಗಳಿಗೆ ಹೊಸ ಉಪಚುನಾವಣೆ ದಿನಾಂಕ ಘೋಷಣೆ| ಕೇಂದ್ರ ಚುನಾವಣಾ ಆಯೋಗದಿಂದ ಹೊಸ ವೇಳಾಪಟ್ಟಿ| ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪ ಚುನಾವಣೆ ಫಿಕ್ಸ್.

Election Commission announces New BY Election Dates To 15  constituency In Karnataka

ಬೆಂಗಳೂರು, [ಸೆ. 27]: ರಾಜ್ಯದ  ಅನರ್ಹ ಶಾಸಕರ  ಕ್ಷೇತ್ರಗಳಿಗೆ ಹೊಸ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಇಂದು [ಶುಕ್ರವಾರ] ಕೇಂದ್ರ ಚುನಾವಣೆ ಆಯೋಗ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಅನರ್ಹರಿಗೆ ಬಿಗ್ ರಿಲೀಫ್, ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ತಡೆ 

ಈ ಮೊದಲು ಘೋಷಣೆಯಾಗಿದ್ದ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗ ಹೊಸ ಮುಹೂರ್ತ ನಿಗದಿಪಡಿಸಿದೆ. ಇದರಿಂದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ಅನರ್ಹ ಶಾಸಕರಿಗೆ ಮತ್ತೆ ಟೆನ್ಷನ್ ಶುರುವಾಗಿದೆ.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ...

ಚುನಾವಣೆ ನಿಗದಿಪಡಿಸಿದ ಬೆನ್ನಲ್ಲೇ ಚುನಾವಣಾ ಆಯೋಗವು ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿತ್ತು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಸ್ವತಃ ಆಯೋಗವೇ ಅನರ್ಹ ಶಾಸಕರ ಸ್ಪರ್ಧೆಗೆ ತನ್ನ ಅಭ್ಯಂತರವಿಲ್ಲ ಎಂದಿತ್ತು. ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು, ಇಲ್ಲವೇ ಚುನಾವಣೆಗೆ ತಡೆ ನೀಡಬೇಕು ಎಂದು ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಮನವಿ ಮಡಿದ್ದರು. 

 ಬಳಿಕ ಸುಪ್ರೀಂಕೋರ್ಟ್ ಗುರುವಾರ ಚುನಾವಣೆಯನ್ನು ಮುಂದೂಡುವಂತೆ ಸೂಚನೆ ನೀಡಿ, ಅರ್ಜಿಯ ವಿಚಾರಣೆಯನ್ನು ಅ. 22ಕ್ಕೆ ಮುಂದೂಡಿತ್ತು. ಅದರ ಮರುದಿನವೇ ಕೇಂದ್ರ ಚುನಾವಣೆ ಆಯೋಗ ಹೊಸ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. 

17 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 15 ಕ್ಷೇತ್ರಗಳಿಗಷ್ಟೇ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಅನರ್ಹ ಶಾಸಕ   ಮುನಿರತ್ನ ಪ್ರತಿನಿಧಿಸುತ್ತಿದ್ದ ಆರ್. ಆರ್ ನಗರ ಕ್ಷೇತ್ರ ಹಾಗೂ  ಪ್ರತಾಪ್ ಗೌಡ ಪಾಟೀಲ್ ಪ್ರತಿನಿಧಿಸುತ್ತಿದ್ದ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. 

ನವೆಂಬರ್ 11 ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21 ನಾಮಪತ್ರ ಹಿಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 11ರೊಳಗೆ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಕೇಂದ್ರ ಚುನಾವಣಾ ಆಯೋಗದಿಂದ ಹೊಸ ವೇಳಾಪಟ್ಟಿ
* ನವೆಂಬರ್ 11ರಿಂದ ನಾಮಪತ್ರಗಳ ಸಲ್ಲಿಕೆ ಆರಂಭ
* ನವೆಂಬರ್ 18 - ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
* ನವೆಂಬರ್ 19ರಂದು ನಾಮಪತ್ರಗಳ ಪರಿಶೀಲನೆ ದಿನ
* ನವೆಂಬರ್ 21 - ನಾಮಪತ್ರ ಹಿಂಪಡೆಯಲು ಕೊನೆ ದಿನ
* ಡಿಸೆಂಬರ್ 5ರಂದು 15 ಕ್ಷೇತ್ರಗಳಲ್ಲಿ ಮತದಾನ
* ಸದ್ಯಕ್ಕೆ ಚುನಾವಣಾ ಫಲಿತಾಂಶದ ದಿನಾಂಕ ನಿಗದಿ ಇಲ್ಲ

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು...
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9)ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ.

ಹಳೆ ವೇಳಾಪಟ್ಟಿ
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
 ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
 ನಾಮಪತ್ರ ಪರಿಶೀಲನೆ -ಅಕ್ಟೋಬರ್ 1 
ನಾಮಪತ್ರ ವಾಪಸ್: ಅಕ್ಟೋಬರ್.3 
ಮತದಾನ ಅಕ್ಟೋಬರ್ 21
 ಫಲಿತಾಂಶ ಅಕ್ಟೋಬರ್ 24.

Latest Videos
Follow Us:
Download App:
  • android
  • ios