ಒಂದು ವರ್ಷಕ್ಕೆ ಒಂದೇ ಸಲ ಚುನಾವಣೆ

Election Commission Alternative to Simultaneous Polls : One Year One Election
Highlights

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೆ ಐದು ವರ್ಷದಲ್ಲಿ ಒಮ್ಮೆ ಏಕಕಾಲಕ್ಕೆ ಚುನಾವಣೆ ನಡೆಸುವ ಕೇಂದ್ರ  ಸರ್ಕಾರದ ಪ್ರಸ್ತಾಪಕ್ಕೆ ಚುನಾವಣಾ ಆಯೋಗವು ಸಹಮತ ಸೂಚಿಸುವುದರ ಜೊತೆಗೇ ತನ್ನದೇ ಆದ ಹೊಸ ಚಿಂತನೆಯೊಂದನ್ನು ಹರಿಬಿಟ್ಟಿದೆ. 

ನವದೆಹಲಿ: ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೆ ಐದು ವರ್ಷದಲ್ಲಿ ಒಮ್ಮೆ ಏಕಕಾಲಕ್ಕೆ ಚುನಾವಣೆ ನಡೆಸುವ ಕೇಂದ್ರ  ಸರ್ಕಾರದ ಪ್ರಸ್ತಾಪಕ್ಕೆ ಚುನಾವಣಾ ಆಯೋಗವು ಸಹಮತ ಸೂಚಿಸುವುದರ ಜೊತೆಗೇ ತನ್ನದೇ ಆದ ಹೊಸ ಚಿಂತನೆಯೊಂದನ್ನು ಹರಿಬಿಟ್ಟಿದೆ. 

ಅದು - ಒಂದು ವರ್ಷಕ್ಕೆ ಒಂದೇ ಸಲ ಚುನಾವಣೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗೆ ಏಕಕಾಲದ ಚುನಾವಣೆ ನಡೆಸುವ ಬಗ್ಗೆ ಕಾನೂನು ಆಯೋಗವು 5 ಸಾಂವಿಧಾನಿಕ ಸಮಸ್ಯೆಗಳು ಮತ್ತು 15  ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಪಟ್ಟಿ ಮಾಡಿ, ಈ ಬಗ್ಗೆ ನಿಮ್ಮ ನಿಲುವೇನು ಎಂದು ಚುನಾವಣಾ ಆಯೋಗವನ್ನು ಕೇಳಿತ್ತು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಈ ಎಲ್ಲ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಹಾಗೂ ಆರ್ಥಿಕವಾಗಿ ಪರಿಹರಿಸುವುದಾದರೆ ಏಕಕಾಲದ ಚುನಾವಣೆಗೆ ನಮ್ಮ ಬೆಂಬಲವಿದೆ. ಅದರ ಜೊತೆಗೆ, ಒಂದು ವರ್ಷಕ್ಕೆ ಒಂದೇ ಸಲ ಚುನಾವಣೆ ನಡೆಸುವ ಇನ್ನೊಂದು ವ್ಯವಸ್ಥೆಯ ಬಗ್ಗೆಯೂ ಪರಿಶೀಲಿಸಬಹುದು. 

ಅಂದರೆ, ಒಂದು ವರ್ಷದಲ್ಲಿ ಎರಡು-ಮೂರು ಬಾರಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುವುದಿದ್ದರೆ ಅವುಗಳನ್ನೆಲ್ಲ ಒಟ್ಟಿಗೇ ಸೇರಿಸಿ, ಒಂದೇ ಸಲ ಚುನಾವಣೆ ನಡೆಸಬಹುದು. ಇದಕ್ಕೆ, ಸರ್ಕಾರದ ಅವಧಿ ಮುಗಿಯುವುದಕ್ಕೆ ಆರು ತಿಂಗಳಿಗಿಂತ ಮೊದಲು ಚುನಾವಣೆ ನಡೆಸುವಂತಿಲ್ಲ ಎಂಬ ಪ್ರಜಾಪ್ರತಿನಿಧಿ ಕಾಯ್ದೆಯ ನಿಯಮಕ್ಕೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಹೇಳಿದೆ.

loader