ಸಮೀಪಿಸುತ್ತಿದೆ ಚುನಾವಣೆ; ಗಣಿನಾಡಿನ ಮೇಲೆ ಚುನಾವಣಾ ಆಯೋಗ ನಿಗಾ

First Published 29, Mar 2018, 4:16 PM IST
Election Commission Alert in Bellary
Highlights

ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರಚಾರ ಜೋರಾಗಿದೆ. ಚುನಾವಣಾ ಆಯೋಗ ಪ್ರಚಾರದ ಮೇಲೆ ಕಣ್ಣಿಟ್ಟಿದೆ. ಗಣಿನಾಡು ಬಳ್ಳಾರಿ ಮೇಲೂ ಕಣ್ಣಿಟ್ಟಿದೆ. 

ಬಳ್ಳಾರಿ (ಮಾ. 29): ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರಚಾರ ಜೋರಾಗಿದೆ. ಚುನಾವಣಾ ಆಯೋಗ ಪ್ರಚಾರದ ಮೇಲೆ ಕಣ್ಣಿಟ್ಟಿದೆ. ಗಣಿನಾಡು ಬಳ್ಳಾರಿ ಮೇಲೂ ಕಣ್ಣಿಟ್ಟಿದೆ. 

ಚುನಾವಣೆಯಲ್ಲಿ ಹಣದ ಹೊಳೆ ಹರಿಸುವ ಕ್ಷೇತ್ರಗಳ ಮೇಲೆ ಆಯೋಗ ಗಮನ ಇಟ್ಟಿದೆ.  224 ಕ್ಷೇತ್ರಗಳ ಪೈಕಿ 61 ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಇಡಲಾಗಿದೆ.   ದುಡ್ಡಿನ ಹೊಳೆ ಹರಿಸುವ 61 ಕ್ಷೇತ್ರಗಳಲ್ಲಿವೆ.  ಬಳ್ಳಾರಿಯ ಮೂರು ಕ್ಷೇತ್ರಗಳಾದ  ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಹೊಸಪೇಟೆಯಲ್ಲಿ ದುಡ್ಡಿನ ಹೊಳೆ ಹರಿಯುವ ಸಾಧ್ಯತೆ ಇದೆ. ಹಾಗಾಗಿ ಗಣಿ ಉದ್ಯಮಿಗಳ ಮೇಲೆ ಕಣ್ಣಿಡಲಾಗಿದೆ. 

ಸಾಮಾನ್ಯವಾಗಿ ಒಂದು ಕ್ಷೇತ್ರಕ್ಕೆ ಒಬ್ಬ ಚುನಾವಣೆ ವೆಚ್ಚ ವೀಕ್ಷಕರ ನೇಮಕ ಆದ್ರೆ, ಬಳ್ಳಾರಿಯ ಮೂರು ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಇಬ್ಬರು ವೀಕ್ಷಕರ ನೇಮಕ  ಮಾಡಲಾಗಿದೆ. ಗಣಿ ಉದ್ಯಮಿಗಳಾದ ಗವಿಯಪ್ಪ, ದೀಪಕ್ ಸಿಂಗ್ ಮೇಲೂ ಹೆಚ್ಚಿನ ನಿಗಾ ಇಡಲಾಗಿದೆ. 

loader