ಈಜಿಪ್ಟ್‌ನ ಅಲ್ ಅರಿಶ್ ನಗರದ ಮಸೀದಿಯೊಂದರ ಮೇಲೆ ಉಗ್ರರು ಶುಕ್ರವಾರ ನಡೆಸಿರುವ ಭೀಕರ ದಾಳಿಯಲ್ಲಿ 235ಕ್ಕೂ ಜನ ಬಲಿಯಾಗಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಕೈರೋ: ಈಜಿಪ್ಟ್‌ನ ಅಲ್ ಅರಿಶ್ ನಗರದ ಮಸೀದಿಯೊಂದರ ಮೇಲೆ ಉಗ್ರರು ಶುಕ್ರವಾರ ನಡೆಸಿರುವ ಭೀಕರ ದಾಳಿಯಲ್ಲಿ 235ಕ್ಕೂ ಜನ ಬಲಿಯಾಗಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ವರ್ಷಗಳಲ್ಲೇ ಭೀಕರ ಎನ್ನಬಹುದಾದ ಈ ದಾಳಿ ಈಜಿಪ್ಟ್ ಅನ್ನು ಬೆಚ್ಚಿಬೀಳಿಸಿದೆ.

ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ. ಸಿನಾಯ್ ಪ್ರಾಂತ್ಯದಲ್ಲಿನ ಅಲ್ ರೌಡಾ ಮಸೀದಿ ಮೇಲೆ ಮೊದಲು ಉಗ್ರರು ಬಾಂಬ್ ದಾಳಿ ನಡೆಸಿದ್ದರು.

ಈ ದಾಳಿಯಿಂದ ಆತಂಕಗೊಂಡ ಜನರು ಗಾಬರಿಯಿಂದ ಹೊರಬರುತ್ತಲೇ ಅವರ ಮೇಲೆ ಗುಂಡಿನ ದಾಳಿಸಿದ ಉಗ್ರರು 235 ಜನರನ್ನು ಬಲಿ ಪಡೆದಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಎಲ್ಲೆಂದರಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಭೀಭತ್ಸ ದೃಶ್ಯವನ್ನು ಸೃಷ್ಟಿಸಿದೆ.