Asianet Suvarna News Asianet Suvarna News

ಮೊಟ್ಟೆಯೊಳಗೊಂದು ಮೊಟ್ಟೆ - ಅಚ್ಚರಿ..!

ಸಾಮಾನ್ಯವಾಗಿ ಕೋಳಿ ಮೊಟ್ಟೆ ಒಂದೇ ಗಾತ್ರದಲ್ಲಿರುತ್ತವೆ. ಆದರೆ, ಉತ್ತರ ಕ್ವೀನ್ಸ್ ಲ್ಯಾಂಡ್‌ನ ಕೈನ್ಸ್‌ರ್‍ ಕೈರಿ ಎಂಬಲ್ಲಿನ ಫಾರಂ ಒಂದರಲ್ಲಿ ದೊರೆತ ಕೋಳಿ ಮೊಟ್ಟೆಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಮೂರು ಸಾವಿರ ಕೋಳಿಗಳುಳ್ಳ ಈ ಫಾರಂನಲ್ಲಿ ಎಂದಿನಂತೆ ಕೆಲಸಗಾರರು ಮೊಟ್ಟೆ ಸಂಗ್ರಹಿಸುತ್ತಿದ್ದಾಗ ಅಚ್ಚರಿಯೊಂದು ಕಾದಿತ್ತು.

Egg inside Onother Egg

ಬ್ರಿಸ್ಬೇನ್‌: ಸಾಮಾನ್ಯವಾಗಿ ಕೋಳಿ ಮೊಟ್ಟೆ ಒಂದೇ ಗಾತ್ರದಲ್ಲಿರುತ್ತವೆ. ಆದರೆ, ಉತ್ತರ ಕ್ವೀನ್ಸ್ ಲ್ಯಾಂಡ್‌ನ ಕೈನ್ಸ್‌ರ್‍ ಕೈರಿ ಎಂಬಲ್ಲಿನ ಫಾರಂ ಒಂದರಲ್ಲಿ ದೊರೆತ ಕೋಳಿ ಮೊಟ್ಟೆಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಮೂರು ಸಾವಿರ ಕೋಳಿಗಳುಳ್ಳ ಈ ಫಾರಂನಲ್ಲಿ ಎಂದಿನಂತೆ ಕೆಲಸಗಾರರು ಮೊಟ್ಟೆ ಸಂಗ್ರಹಿಸುತ್ತಿದ್ದಾಗ ಅಚ್ಚರಿಯೊಂದು ಕಾದಿತ್ತು.

ಬರೋಬ್ಬರಿ ವಯಸ್ಕ ವ್ಯಕ್ತಿಯೊಬ್ಬ ತನ್ನ ಕೈ ಪೂರ್ತಿ ಹಿಡಿದು ಕೊಳ್ಳಬಹುದಾದಷ್ಟು ದೊಡ್ಡ ಗಾತ್ರದ ಮೊಟ್ಟೆ ಪತ್ತೆಯಾಗಿದೆ. ಸುಮಾರು 176 ಗ್ರಾಂ ತೂಕದ ಮೊಟ್ಟೆಸಾಮಾನ್ಯ ಗಾತ್ರದ ಮೊಟ್ಟೆಗಿಂತ ಮೂರು ಪಟ್ಟು ದೊಡ್ಡದಾಗಿದೆ. ಮೊಟ್ಟೆಯನ್ನು ಒಡೆದು ನೋಡಿದಾಗ, ಅದರೊಳಗೆ ಹಳದಿ ಬಣ್ಣದ ಲೋಳೆ ಇದ್ದುದಲ್ಲದೆ, ಇನ್ನೊಂದು ಮೊಟ್ಟೆಯೂ ಇದ್ದುದು ಪತ್ತೆಯಾಗಿದೆ.

Follow Us:
Download App:
  • android
  • ios