Asianet Suvarna News Asianet Suvarna News

ವಿದ್ಯಾರ್ಥಿಗಳ ವಿವರ ಖಾಸಗಿಗೆ ನೀಡುವ ಒಪ್ಪಂದ ರದ್ದು

ವಿದ್ಯಾರ್ಥಿಗಳು ಹಾಗೂ ಪೋಷಕರ ವೈಯ​ಕ್ತಿಕ ಮಾಹಿ​ತಿ​ಯನ್ನು ಖಾಸಗಿ ಸಂಸ್ಥೆ​ಯೊಂದಕ್ಕೆ ನೀಡುವ ವಿವಾ​ದಾ​ತ್ಮಕ ನಿರ್ಧಾ​ರ​ವನ್ನು ರಾಜ್ಯ ಸರ್ಕಾರ ಹಿಂತೆ​ಗೆ​ದು​ಕೊಂಡಿದ್ದು, ಈ ಬಗ್ಗೆ ಸ್ಕೂಲ್‌  ಲಿಂಕ್‌ ಎಂಬ ಸಂಸ್ಥೆ​ಯೊಂದಿಗೆ ಪ್ರಾಥ​ಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಡಿ​ಕೊಂಡಿ​ರುವ ಒಪ್ಪಂದವನ್ನು ಶುಕ್ರ​ವಾರ ರದ್ದು​ಗೊ​ಳಿ​ಸ​ಲಾ​ಯಿ​ತು.

Education department cancels Education Agriment

ಬೆಂಗಳೂರು : ವಿದ್ಯಾರ್ಥಿಗಳು ಹಾಗೂ ಪೋಷಕರ ವೈಯ​ಕ್ತಿಕ ಮಾಹಿ​ತಿ​ಯನ್ನು ಖಾಸಗಿ ಸಂಸ್ಥೆ​ಯೊಂದಕ್ಕೆ ನೀಡುವ ವಿವಾ​ದಾ​ತ್ಮಕ ನಿರ್ಧಾ​ರ​ವನ್ನು ರಾಜ್ಯ ಸರ್ಕಾರ ಹಿಂತೆ​ಗೆ​ದು​ಕೊಂಡಿದ್ದು, ಈ ಬಗ್ಗೆ ಸ್ಕೂಲ್‌  ಲಿಂಕ್‌ ಎಂಬ ಸಂಸ್ಥೆ​ಯೊಂದಿಗೆ ಪ್ರಾಥ​ಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಡಿ​ಕೊಂಡಿ​ರುವ ಒಪ್ಪಂದವನ್ನು ಶುಕ್ರ​ವಾರ ರದ್ದು​ಗೊ​ಳಿ​ಸ​ಲಾ​ಯಿ​ತು.

ಹೆಸರು, ವಿಳಾಸ ಹಾಗೂ ದೂರ​ವಾಣಿ ಸಂಖ್ಯೆಯೂ ಸೇರಿ​ದಂತೆ ವಿದ್ಯಾ​ರ್ಥಿ​ಗಳು ಹಾಗೂ ಪೋಷ​ಕರ ವೈಯ​ಕ್ತಿಕ ಮಾಹಿ​ತಿ​ಯನ್ನು ಪಡೆದು, ಸ್ಕೂಲ್‌್ಜ ಲಿಂಕ್‌ ಎಂಬ ಸಂಸ್ಥೆಗೆ ನೀಡು​ವುದು ಮತ್ತು ಈ ಮಾಹಿ​ತಿ​ಯನ್ನು ಸದರಿ ಸಂಸ್ಥೆಯು ಆ್ಯಪ್‌ ರೂಪಿ​ಸಲು ಬಳ​ಸಿ​ಕೊ​ಳ್ಳು​ವುದು ಒಪ್ಪಂದದ ಭಾಗ​ವಾ​ಗಿತ್ತು. ಈ ಆತಂಕ​ಕಾರಿ ಒಪ್ಪಂದದ ಮಾಹಿತಿ ಕನ್ನ​ಡ​ಪ್ರಭ ಸೇರಿ​ದಂತೆ ಮಾಧ್ಯ​ಮ​ಗ​ಳಲ್ಲಿ ಶುಕ್ರ​ವಾರ ಬಹಿ​ರಂಗ​ಗೊ​ಳ್ಳು​ತ್ತಿ​ದ್ದಂತೆಯೇ ಶಿಕ್ಷಣ ಇಲಾ​ಖೆಯ ನಿರ್ಧಾ​ರಕ್ಕೆ ರಾಜ್ಯಾ​ದ್ಯಂತ ವ್ಯಾಪಕ ವಿರೋಧ ಹಾಗೂ ಟೀಕೆ ಕೇಳಿ ಬಂದಿತ್ತು.

ಈ ಹಿನ್ನೆ​ಲೆ​ಯಲ್ಲಿ ಎಚ್ಚೆತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಶುಕ್ರವಾರ ತರಾ​ತು​ರಿ​ಯಲ್ಲಿ ಈ ಒಪ್ಪಂದ​ವನ್ನು ರದ್ದು​ಗೊ​ಳಿಸಿ, ಅಧಿ​ಕೃತ ಆದೇಶ ಬಿಡು​ಗಡೆ ಮಾಡಿ​ದೆ. ಈ ಆದೇ​ಶ​ದಲ್ಲಿ, ಹಳೆಯ ವಿದ್ಯಾರ್ಥಿಗಳ ಸಂಘ, ಪೋಷಕರು, ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶ ಈ ಒಪ್ಪಂದದ ಹಿಂದೆ​ಯಿ​ತ್ತು. ಆದರೆ, ಶಿಕ್ಷಣ ಇಲಾಖೆ ಹಾಗೂ ಸ್ಕೂಲ್‌ ಲಿಂಕ್‌ ಖಾಸಗಿ ಸಂಸ್ಥೆ ನಡುವೆ ಆ್ಯಪ್‌ ಬಳಕೆ ಕುರಿತು ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಇಲಾಖಾ ದತ್ತಾಂಶಗಳನ್ನು ಖಾಸಗಿ ಸಂಸ್ಥೆ ಜತೆ ಹಂಚಿಕೊಳ್ಳಲಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವರದಿಗಳು ಪ್ರಕಟಗೊಂಡಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಆಕ್ಷೇಪಣೆಗಳು ಕೇಳಿ ಬಂದಿರುವುದರಿಂದ ಸ್ಕೂಲ್‌್ಜಲಿಂಕ್‌ ಸಂಸ್ಥೆ ಜತೆಗಿನ ಒಡಂಬಡಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಅಂತಹ ತಪ್ಪು ನಾ ಮಾಡ​ಲ್ಲ- ಶಾಲಿ​ನಿ:

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಶಿಕ್ಷಣದ ಗುಣಮಟ್ಟಕಾಪಾಡುವ ಉದ್ದೇಶದಿಂದ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘ ಆರಂಭಿಸಿದ್ದ ಸ್ಟಾರ್ಟ್‌ ಅಪ್‌ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಹಳೆಯ ವಿದ್ಯಾರ್ಥಿಗಳ ಸಂಘ, ಪೋಷಕರು, ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶ ಇದರ ಹಿಂದೆ ಇತ್ತು. ಸಮಯ ಉಳಿತಾಯವಾಗಲಿದೆ ಎಂಬ ಉದ್ದೇಶದಿಂದ ಎಜುಕೇಷನ್‌ ಪೋರ್ಟಲ್‌ ಮಾಡಲು ಈ ದತ್ತಾಂಶ ನೀಡಲು ಉದ್ದೇ​ಶಿ​ಸ​ಲಾ​ಗಿತ್ತೇ ಹೊರತು ಬೇರೆ ಯಾವುದೇ ಉದ್ದೇ​ಶ​ವಿ​ರ​ಲಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಈ ಒಪ್ಪಂದ​ದಿಂದ ವಿದ್ಯಾ​ರ್ಥಿ​ಗಳ ಮಾಹಿತಿ ದುರು​ಪ​ಯೋಗವಾಗುತ್ತಿರಲಿಲ್ಲ. ನನಗೂ ಒಬ್ಬಳು ಮಗಳಿದ್ದಾಳೆ. ಪೋಷಕರ ಆತಂಕ ಏನೆಂಬುದನ್ನು ಇಲಾಖೆಯ ಜವಾಬ್ದಾರಿಯುತ ಅಧಿಕಾರಿಯಾಗಿ ತಿಳಿದಿದ್ದೇನೆ. ಇದರಲ್ಲಿ ಯಾವುದೇ ರೀತಿಯಲ್ಲಿ ಅವ್ಯವಹಾರ ನಡೆದಿರಲಿಲ್ಲ. ನಯಾ ಪೈಸೆಯನ್ನು ಯಾವುದೇ ಸಂಸ್ಥೆಯಿಂದ ತೆಗೆದುಕೊಂಡಿಲ್ಲ ಮತ್ತು ಶಿಕ್ಷಣ ಇಲಾಖೆಯು ನಯಾ ಪೈಸೆಯನ್ನು ಖರ್ಚು ಮಾಡಿಲ್ಲ. ಇಲಾಖೆಯ ಸಚಿವರು ಮತ್ತು ಕಾನೂನು ಇಲಾಖೆಯ ಅನುಮೋದನೆ ಆಧಾರದ ಮೇಲೆಯೇ ನಿಯಮಗಳ ಪ್ರಕಾರ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದೀಗ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಒಡಂಬಡಿಕೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios