ಐಟಿ ಶಾಕ್ ಬಳಿಕ ಇದೀಗ ಡಿಕೆಶಿಗೆ ಮತ್ತೊಂದು ಸಂಕಷ್ಟ.?

ED Trouble for K'taka minister DK Shivakumar
Highlights

ಆದಾಯ ತೆರಿಗೆ ಇಲಾಖೆಗೆ ಸಚಿವ ಡಿ.ಕೆ. ಶಿವಕುಮಾರ್ ಸುಳ್ಳು ಮಾಹಿತಿ ನೀಡಿದ್ದಾರೆಂಬ ಆರೋಪದ ಪ್ರಕರಣಕ್ಕೆ  ಸಂಬಂಧಿಸಿದಂತೆ ಜಾರಿ ನಿರ್ದೇಶನಾ ಲಯ (ಇಡಿ) ವಿವರ ಪಡೆದುಕೊಂಡಿದ್ದು, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅವಲೋಕನ ನಡೆಸಿದೆ. 

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ಸಚಿವ ಡಿ.ಕೆ. ಶಿವಕುಮಾರ್ ಸುಳ್ಳು ಮಾಹಿತಿ ನೀಡಿದ್ದಾರೆಂಬ ಆರೋಪದ ಪ್ರಕರಣಕ್ಕೆ  ಸಂಬಂಧಿಸಿದಂತೆ ಜಾರಿ ನಿರ್ದೇಶನಾ ಲಯ (ಇಡಿ) ವಿವರ ಪಡೆದುಕೊಂಡಿದ್ದು, ಮುಂದೆ ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಅವಲೋಕನ ನಡೆಸಿದೆ. ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರಿನಲ್ಲಿ ಹಣಕಾಸು ಅಕ್ರಮಗಳ ಬಗ್ಗೆ ಉಲ್ಲೇಖವಾಗಿದ್ದು, ಇದು ತಮ್ಮ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇರುವುದರಿಂದ ಇ.ಡಿ. ಅಧಿಕಾರಿಗಳು ಐಟಿ ಇಲಾಖೆಯಿಂದ ಮಾಹಿತಿ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಆದಾಯ ತೆರಿಗೆ ಇಲಾಖೆಗೆ ಸಚಿವ ಡಿ.ಕೆ.ಶಿವಕುಮಾರ್ ಸುಳ್ಳು ಮಾಹಿತಿ ನೀಡಿದ್ದಾರೆಂಬ ಆರೋಪದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ವಿವರ ಪಡೆದುಕೊಂಡಿದ್ದು, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅವಲೋಕನ ನಡೆಸಿದೆ. ಸಚಿವ ಶಿವಕುಮಾರ್ ಅವರು ಎಸಗಿದ್ದಾರೆ ಎನ್ನಲಾದ ಅಕ್ರಮದ ಬಗ್ಗೆ ಐಟಿ ಅಧಿಕಾರಿಗಳು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ವಿಸ್ತೃತವಾಗಿ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿನ ನಿವಾಸದಲ್ಲಿ ಪತ್ತೆಯಾದ ಎಂಟು ಕೋಟಿ ರು.ಗಿಂತ ಹೆಚ್ಚಿನ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಹಾಗೂ ಹಾಗೂ ಹವಾಲಾ ದಂಧೆಗೆ ಬಳಸಿಕೊಂಡಿರುವ ಬಗ್ಗೆ ದೂರಿನಲ್ಲಿ ಪ್ರಸ್ತಾಪವಾಗಿದೆ.

ಹೀಗಾಗಿ ಇ.ಡಿ. ಅಧಿಕಾರಿಗಳು ಪ್ರಕರಣವು ತಮ್ಮ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇರುವ ಕಾರಣ ಐಟಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 2017ರ ಆ.2ರಂದು ಡಿ.ಕೆ.ಶಿವಕುಮಾರ್ ಸೇರಿದಂತೆ ಅವರ ಕುಟುಂಬ ವರ್ಗದವರು, ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಒಂದು ವಾರದ ಕಾಲ ತಪಾಸಣೆ ನಡೆಸಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪವಾದ್ದರಿಂದ ಇ.ಡಿ. ಅಧಿಕಾರಿಗಳು ಪ್ರಕರಣದಿಂದ ದೂರ ಉಳಿದಿದ್ದರು. ಆದರೆ, ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ಆರೋಪ ಕೂಡ ಕೇಳಿಬಂದಿರುವುದರಿಂದ ಇ.ಡಿ. ಪ್ರವೇಶ ಮಾಡಿದೆ. 

ಪ್ರಸ್ತುತ ಮಾಹಿತಿ ಪಡೆದುಕೊಂಡಿರುವ ಇ.ಡಿ. ಅಧಿಕಾರಿಗಳು ಪ್ರಕರಣದ ಸಂಪೂರ್ಣ ಅಧ್ಯಯನ ನಡೆಸುವಲ್ಲಿ ನಿರತರಾದ್ದಾರೆ. ಎಫ್‌ಐಆರ್ ದಾಖಲಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಲ್ಲದೇ,  ವಕುಮಾರ್ ಮತ್ತು ಇತರರ ವಿರುದ್ಧ ತನಿಖೆ ಕೈಗೊಂಡು ಶಿಕ್ಷೆಗೊಳಪಡಿಸುವ ಅಧಿಕಾರ ಐಟಿ ಇಲಾಖೆಗೆ ಇರುವ ಹಿನ್ನೆಲೆಯಲ್ಲಿಇ.ಡಿ.ಯ ಕಾರ್ಯವ್ಯಾಪ್ತಿ ಏನು ಎಂಬುದರ ಕುರಿತು ಕಾನೂನು ಸಲಹೆ ಪಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

loader