ಡಿಕೆಶಿ ಹಾಜರಾಗುವ ಕೋರ್ಟ್ ಯಾವುದು? ಡಿಕೆಶಿ ಪರ ವಕೀಲ ಯಾರು? ಇಲ್ಲಿದೆ ಡಿಟೇಲ್ಸ್
ಇಡಿ ಬಂಧನಗೊಳಗಾಗಿ ನವದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಇನ್ನು ಕೆಲವೇ ಕ್ಷಣಗಳಲ್ಲಿ ನ್ಯಾಯಾಲಕ್ಕೆ ಹಾಜರುಪಡಿಸಲಾಗುತ್ತಿದೆ. ಮೂರು ಕೋರ್ಟ್‌ಗಳ ಪೈಕಿ ಒಂದು ನ್ಯಾಯಾಲವನ್ನು ಫಿಕ್ಸ್ ಮಾಡಲಾಗಿದೆ. ಹಾಗಾದ್ರೆ ಡಿಕೆಶಿ ಹಾಜರಾಗು ಕೋರ್ಟ್ ಯಾವುದು? ಡಿಕೆಶಿ ಪರ ವಕೀಲ ಯಾರು? ಇಲ್ಲಿದೆ ಫುಲ್ ಡಿಟೇಲ್ಸ್
ನವದೆಹಲಿ, (ಸೆ.04): ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಇಡಿ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಅವರನ್ನು ಯಾವ ಕೋರ್ಟ್‌ಗೆ ಹಾಜರುಪಡಿಸುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಪಿಎಂಎಲ್ಎ ಕಾಯ್ದೆ -2002ರ ಅನ್ವಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಇಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಡಿಕೆಶಿ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಲೋ ಬಿಪಿ ಹಾಗೂ ಹೈ ಶೂಗರ್‌ನಿಂದ ಬಳಲುತ್ತಿರುವ ಡಿಕೆಶಿಯನ್ನು ಆರ್‌ಎಂಎಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇನ್ನೇನು ಕಲವೇ ಕ್ಷಣಗಳಲ್ಲಿ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ.
ಇಡಿ ವಿಶೇಷ ಕೋರ್ಟ್ ಜಡ್ಜ್ ಅಜಯ್ ಕುಮಾರ್ ಕುಹಾರ್ ಮುಂದೆ ಡಿಕೆಶಿ ಪರ ಅಭಿಷೇಕ್ ಮನು ಸಂಘ್ವಿ ಅವರು ವಾದ ಮಂಡಿಸಲಿದ್ದಾರೆ
ವಿಚಾರಣೆಗೆ ಹೋಗಿದ್ದ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಖಾನ್ ಮಾರ್ಕೆಟ್ ನ ತನ್ನ ಪ್ರಧಾನ ಕಚೇರಿಯಲ್ಲಿ ನಿನ್ನೆ (ಮಂಗಳವಾರ) ಬಂಧಿಸಿದೆ.
ಇದು ನವದೆಹಲಿಯ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಪಟಿಯಾಲ ನ್ಯಾಯಾಲಯಕ್ಕೂ ಸಹ ಡಿಕೆ ಶಿವಕುಮಾರ್ ಅವರನ್ನು ಹಾಜರುಪಡಿಸಬಹುದಿತ್ತು. ಆದ್ರೆ, ಇಡಿ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಇಡಿಯು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಆರೋಪಗಳನ್ನು ಹೆಚ್ಚಾಗಿ ಹಾಜರು ಪಡಿಸುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.