ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ವಿರುದ್ಧ ಮತ್ತೊಂದು ಆರೋಪ

ED questions Shilpa Shetty's husband Raj Kundra
Highlights

ನಿಷೇಧಿತ ಬಿಟ್‌ಕಾಯಿನ್‌ ವ್ಯವಹಾರ ಪ್ರಕರಣವೊಂದರ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ನಟಿ ಶಿಲ್ಪಾ ಶೆಟ್ಟಿಅವರ ಪತಿ ರಾಜ್‌ ಕುಂದ್ರಾ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

ಮುಂಬೈ: ನಿಷೇಧಿತ ಬಿಟ್‌ಕಾಯಿನ್‌ ವ್ಯವಹಾರ ಪ್ರಕರಣವೊಂದರ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ನಟಿ ಶಿಲ್ಪಾ ಶೆಟ್ಟಿಅವರ ಪತಿ ರಾಜ್‌ ಕುಂದ್ರಾ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಟ್‌ಕಾಯಿನ್‌ ಆಧರಿತ ಹೂಡಿಕೆ ವೆಬ್‌ ತಾಣವಾದ ಗೇನ್‌ಬಿಟ್‌ಕಾಯಿನ್‌ ಮತ್ತು ಅದರ ಸಂಸ್ಥಾಪಕರಾದ ಅಮಿತ್‌ ಭಾರದ್ವಾಜ್‌ ಹಾಗೂ ಇತರೆ 8 ಜನರ ವಿರುದ್ಧ ಕೇಸು ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿಕೊಂಡಿತ್ತು. ಈ ಯೋಜನೆಯಲ್ಲಿ ವ್ಯವಹಾರ ನಡೆಸುವ ಮೂಲಕ ಸುಮಾರು 8000 ಹೂಡಿಕೆದಾರರು ಅಂದಾಜು 2000 ಕೋಟಿ ರು. ಹಣ ಕಳೆದುಕೊಂಡಿದ್ದರು.

ತನಿಖೆ ವೇಳೆ ಅಮಿತ್‌ ಹಾಗೂ ಇತರೆ ಕೆಲವರನ್ನು ಇಡಿ ಬಂಧಿಸಿತ್ತು. ಇವರ ವಿಚಾರಣೆ ವೇಳೆ ಪ್ರಕರಣದಲ್ಲಿ ಕೆಲವೊಂದು ಹಂತದಲ್ಲಿ ರಾಜ್‌ಕುಂದ್ರಾ ನಂಟಿನ ಬಗ್ಗೆ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಕುಂದ್ರಾರನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಪ್ರಶ್ನಿಸಲಾಯ್ತು ಎನ್ನಲಾಗಿದೆ. ಈ ಹಿಂದೆ ಐಪಿಎಲ್‌ ಬೆಟ್ಟಿಂಗ್‌ ಹಗರಣದಲ್ಲೂ ರಾಜ್‌ಕುಂದ್ರಾ ಸುದ್ದಿಯಾಗಿದ್ದರು. ಅವರ ಮೇಲೆ ನಿಷೇಧ ಕೂಡಾ ಹೇರಲಾಗಿತ್ತು. ಭಾರತದಲ್ಲಿ ಬಿಟ್‌ಕಾಯಿನ್‌ ವ್ಯವಹಾನ ನಡೆಸುವುದು ಕಾನೂನು ಬಾಹಿರ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

loader