ಐಎನ್‌ಎಸ್ ಮೀಡಿಯಾ ಅಕ್ರಮ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ (ಸಿಎ) ಎಸ್.ಭಾಸ್ಕರರಾಮನ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ನವದೆಹಲಿ: ಐಎನ್‌ಎಸ್ ಮೀಡಿಯಾ ಅಕ್ರಮ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ (ಸಿಎ) ಎಸ್.ಭಾಸ್ಕರರಾಮನ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಧಿತ ರನ್ನು ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು 5 ದಿನಗಳ ವಿಚಾರಣಾ ವಶಕ್ಕೆ ಒಪ್ಪಿಸಿದೆ.

ದೆಹಲಿಯ ಹೋಟೆಲೊಂದರಿಂದ ಶುಕ್ರವಾರ ಭಾಸ್ಕರ ರಾಮನ್‌ರನ್ನು ವಶಕ್ಕೆ ಪಡೆಯಲಾಗಿತ್ತು. ಹಲವು ಸಮನ್ಸ್ ಗಳನ್ನು ಜಾರಿಗೊಳಿಸಲಾಗಿದ್ದರೂ ಅವರು ಕೋರ್ಟ್‌ಗೆ ಹಾಜರಾಗಿರಲಿಲ್ಲ ಎಂದು ಇಡಿ ಪರ ನಿತೇಶ್ ರಾಣಾ ಕೋರ್ಟ್‌ಗೆ ತಿಳಿಸಿದ್ದರು.