Asianet Suvarna News Asianet Suvarna News

ಆರ್ಥಿಕ ನೀತಿಗಳ ಪುನರ್-ವಿಮರ್ಶೆಯಾಗಬೇಕು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ

ಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆರ್ಥಿಕ ನೀತಿಗಳ ಪುನರ್-ವಿಮರ್ಶೆಯಾಗಬೇಕೆಂದು ಕೇಂದ್ರಕ್ಕೆ ಕರೆಯಿತ್ತಿದ್ದಾರೆ.

Economic policies need rethinking Mohan Bhagwat

ನಾಗಪುರ: ಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆರ್ಥಿಕ ನೀತಿಗಳ ಪುನರ್-ವಿಮರ್ಶೆಯಾಗಬೇಕೆಂದು ಕೇಂದ್ರಕ್ಕೆ ಕರೆಯಿತ್ತಿದ್ದಾರೆ.

ನಾಗಪುರದಲ್ಲಿ ವಿಜಯದಶಮಿ ಭಾಷಣ ಮಾಡಿದ ಭಾಗವತ್,  ಕೇಂದ್ರವು ಆರ್ಥಿಕ ನೀತಿಯಲ್ಲಿ ಸುಧಾರಣೆ ತರಬೇಕು; ಆರ್ಥಿಕ ಸಲಹೆಗಾರರು ಹಳೆಯ ‘ಆರ್ಥಿಕವಾದ’ಗಳಿಂದ ಹೊರಬಂದು, ದೇಶದ ಪ್ರಸಕ್ತ ವಾಸ್ತವಿಕತೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರಗಳನ್ನು ಮುಂದಿಡುವಂತೆ ಕರೆ ನೀಡಿದ್ದಾರೆ.

ಎಲ್ಲಾ ವರ್ಗದ ವ್ಯಾಪಾರ ವಹಿವಾಟು, ಉದ್ದಿಮೆ ಹಾಗೂ ರೈತರ ಹಿತವನ್ನು ಕಾಪಾಡುವ ಆರ್ಥಿಕ ನೀತಿಯ ಅಗತ್ಯವಿದೆ.  ಈ ಕ್ಷೇತ್ರಗಳಲ್ಲಿ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಂಡು ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಬೇಕು, ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ನೀತಿಗಳ ಪುನರ್-ವಿಮರ್ಶೆ ನಡೆಯಬೇಕು, ಜತೆಗೆ ಉದ್ಯೋಗ ಸೃಷ್ಟಿಯೂ ಆಗಬೇಕು. ಸರ್ಕಾರವು ಜನರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ, ಅದಕ್ಕೆ ಅಗತ್ಯವಿರುವ ಬೆಂಬಲವನ್ನು ಒದಗಿಸಬೇಕೆಂದು, ಭಾಗವತ್ ಕರೆ ನೀಡಿದ್ದಾರೆ.

ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios