Asianet Suvarna News Asianet Suvarna News

ನವಾಜ್ ಇಟ್ಕೊಂಡಿದ್ದ ಎಮ್ಮೆ ಹರಾಜು ಹಾಕಿದ ಇಮ್ರಾನ್!

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕ್! ಇದ್ದಿದ್ದೆಲ್ಲಾ ಹರಾಜು ಹಾಕಿ ಹಣ ಕೂಡಿಸುತ್ತಿರುವ ಇಮ್ರಾನ್! ನವಾಜ್ ಷರೀಫ್ ಅವರ 8 ಎಮ್ಮೆ ಹರಾಜಿಗಿಟ್ಟ ಪಾಕ್ ಪ್ರಧಾನಿ! ಪಾಕ್ ಪ್ರಧಾನಿ ನಿವಾಸದಲ್ಲಿದ್ದ 8 ಎಮ್ಮೆಗಳ ಹರಾಜು! ದುಪ್ಪಟ್ಟು ಹಣಕ್ಕೆ ಎಮ್ಮೆ ಖರೀದಿಸಿದ ಷರೀಫ್ ಅಭಿಮಾನಿ! ಲಕ್ಸುರಿ ಕಾರು, ಹೆಲಿಕಾಪ್ಟರ್ ಹರಾಜು ಹಾಕ್ತಾರಂತೆ ಇಮ್ರಾನ್   

Economic crisis A Buffalo Auction At Pakistan PM House
Author
Bengaluru, First Published Sep 28, 2018, 9:31 AM IST

ಇಸ್ಲಾಮಾಬಾದ್(ಸೆ.28): ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿ, 23 ಲಕ್ಷ ರೂ. ಸಂಪಾದಿಸಿದೆ.

ಬೃಹತ್ ಪ್ರಮಾಣದ ಸಾಲದಿಂದಾಗಿ  ಇಮ್ರಾನ್ ಖಾನ್  ದೊಡ್ಡ ಮಟ್ಟದ ಆರ್ಥಿಕ ಕೊರತೆ ಅನುಭವಿಸುತ್ತಿದ್ದು, ಕಳೆದ ವಾರ ಸರ್ಕಾರದ 61 ಲಕ್ಸುರಿ ಕಾರುಗಳನ್ನು  ಹರಾಜು ಮಾಡಿತ್ತು. ಇದರಿಂದಾಗಿ 200 ಮಿಲಿಯನ್ ಹಣ ಗಳಿಸಿತ್ತು.

ಇಸ್ಲಾಮಾಬಾದ್ ನಲ್ಲಿ ನಡೆದ ಹರಾಜಿನಲ್ಲಿ ಮೂರು ಎಮ್ಮೆಗಳು ಹಾಗೂ ಐದು ಮರಿಗಳನ್ನು 2, 302, 000 ರೂ. ಗೆ ಹರಾಜು ಹಾಕಲಾಗಿದೆ. ಇವುಗಳನ್ನು ನವಾಜ್ ಷರೀಪ್  ಅವರ ಬೆಂಬಲಿಗರೇ ಕೊಂಡು ಕೊಂಡಿದ್ದಾರೆ ಎಂದು  ಡಾನ್  ಪತ್ರಿಕೆ ವರದಿ ಮಾಡಿದೆ.

8 ಎಮ್ಮೆಗಳಲ್ಲಿ ಒಂದನ್ನು  385,000 ರೂ.ಗೆ  ನವಾಜ್ ಷರೀಪ್ ಬೆಂಬಲಿಗ ಕ್ವಾಲಬ್ ಆಲಿ ಎಂಬವರು ಹರಾಜು ಕೂಗಿದ್ದಾರೆ. ಶರೀಫ್  ಮೇಲಿನ ಅಭಿಮಾನದಿಂದಾಗಿ ಮೂರು ಪಟ್ಟು ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳಲಾಗಿದೆ . ನಾಲ್ಕು ಮರಿ ಎಮ್ಮೆಗಳಲ್ಲಿ ಎರಡನ್ನು ಪಿಎಂಎಲ್ -ಎನ್  ಪಕ್ಷದ ಕಾರ್ಯಕರ್ತ ಪಾಖರ್  ವಾರ್ಯಾಚಿ  215, 000 ಹಾಗೂ 270,000ಕ್ಕೆ  ಮತ್ತೊಬ್ಬರು ಮೂರನೇ ಮರಿಯನ್ನು 182,000 ಗೆ ಕೊಂಡುಕೊಂಡಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

68 ವರ್ಷದ ಶರೀಫ್  ಭ್ರಷ್ಟಾಚಾರ ಪ್ರಕರಣದಲ್ಲಿ  10 ವರ್ಷ ಜೈಲುಶಿಕ್ಷೆಗೊಳಗಾಗಿದ್ದರು. ಉನ್ನತ ನ್ಯಾಯಾಲಯ ಶಿಕ್ಷೆಯನ್ನು ರದ್ದುಗೊಳಿಸಿದ ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

Follow Us:
Download App:
  • android
  • ios