ಸಿಎಂ ಜಯಲಲಿತಾಗೆ ECMO ಚಿಕಿತ್ಸೆ ಮುಂದುರಿಸಲಾಗಿದೆ ಅಂತಾ ಚೆನ್ನೈ ಅಪೋಲೋ ಆಸ್ಪತ್ರೆ ಚೀಪ್ ಆಪರೇಟಿಂಗ್ ಆಫೀಸರ್ ಸುಬ್ಬಯ್ಯ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. ಇನ್ನೂ ನುರಿತ ಲಂಡನ್ ತಜ್ಞ ರಿಚರ್ಯ್ ಕೂಡ ಜಯಲಲಿತಾ ಆರೋಗ್ಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಕ್ಷಣದಲ್ಲೂ ಏನ್ ಬೇಕಾದ್ರೂ ಆಗ್ಬಹುದು ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಡಿ.05): ತಮಿಳುವಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ವೈದ್ಯರು ಜಯಲಲಿತಾ ಆರೋಗ್ಯ ಮೇಲೆ ನಿರಂತರ ನಿಗಾ ಇರಿಸಿದ್ದಾರೆ. ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಲೈಫ್ ಸಪೋರ್ಟ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ ಅಂತಾ ಚೆನ್ನೈ ಅಪೋಲೋ ಆಸ್ಪತ್ರೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಸಿಎಂ ಜಯಲಲಿತಾಗೆ ECMO ಚಿಕಿತ್ಸೆ ಮುಂದುರಿಸಲಾಗಿದೆ ಅಂತಾ ಚೆನ್ನೈ ಅಪೋಲೋ ಆಸ್ಪತ್ರೆ ಚೀಪ್ ಆಪರೇಟಿಂಗ್ ಆಫೀಸರ್ ಸುಬ್ಬಯ್ಯ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. ಇನ್ನೂ ನುರಿತ ಲಂಡನ್ ತಜ್ಞ ರಿಚರ್ಯ್ ಕೂಡ ಜಯಲಲಿತಾ ಆರೋಗ್ಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಕ್ಷಣದಲ್ಲೂ ಏನ್ ಬೇಕಾದ್ರೂ ಆಗ್ಬಹುದು ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.
ಹೃದಯ ನಿಧಾನವಾಗಿ ಕಾರ್ಯನಿರ್ವಹಿಸಿದಾಗ ನಾರ್ಮಲ್ ಸ್ಥಿತಿಗೆ ತರಲು ಎಕ್ಮೋ ಚಿಕಿತ್ಸೆ ಸಹಾಯ ಮಾಡುತ್ತದೆ. 3ರಿಂದ 7 ದಿನಗಳ ಕಾಲ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಬಹುದು. ಹಾಗಿದರೆ, ಎಕ್ಮೋ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ನಮ್ಮ ಪ್ರತಿನಿಧಿ ಮಮತಾ ಮರ್ಧಾಳ ಮಾಡಿರುವ ವಾಕ್ ಥ್ರೂ ಇಲ್ಲಿದೆ.