ಚುನಾವಣಾ ಆಯೋಗದ ಬಗ್ಗೆ ಅಪಪ್ರಚಾರ ನಡೆಸುವ, ಆಧಾರ ರಹಿತ ಆಪಾದನೆ ಮಾಡುವವರ ವಿರುದ್ಧ ‘ನಿಂದನಾ ಪ್ರಕ್ರಿಯೆ' ಆರಂಭಿಸುವ ಅಧಿಕಾರವನ್ನು ತನಗೆ ನೀಡಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ನವದೆಹಲಿ: ಚುನಾವಣಾ ಆಯೋಗದ ಬಗ್ಗೆ ಅಪಪ್ರಚಾರ ನಡೆಸುವ, ಆಧಾರ ರಹಿತ ಆಪಾದನೆ ಮಾಡುವವರ ವಿರುದ್ಧ ‘ನಿಂದನಾ ಪ್ರಕ್ರಿಯೆ' ಆರಂಭಿಸುವ ಅಧಿಕಾರವನ್ನು ತನಗೆ ನೀಡಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಬಗ್ಗೆ ನ್ಯಾಯಾಂಗ ನಿಂದನೆ ಕಾಯ್ದೆ-1971ಕ್ಕೆ ತಿದ್ದುಪಡಿ ಮಾಡಬೇಕು ಎಂದು ಆಯೋಗವು ಕೋರಿದೆ. ಒಂದು ವೇಳೆ ತಿದ್ದುಪಡಿಯಾದರೆ, ತನ್ನ ವಿರುದ್ಧ ಆಧಾರರಹಿತ ಆರೋಪ ಮಾಡುವವರ ವಿರುದ್ಧ ನೇರವಾಗಿ ನಿಂದನಾ ಮೊಕದ್ದಮೆ ಹೂಡಿ ವಿಚಾರಣೆ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ದೊರಕಲಿದೆ.

ಈಗಾಗಲೇ ಪಾಕಿಸ್ತಾನ ಚುನಾವಣಾ ಆಯೋಗಕ್ಕೆ ಇಂಥ ಅಧಿಕಾರವಿದೆ. ತನ್ನ ವಿರುದ್ಧ ಆರೋಪ ಮಾಡಿದ ಪಾಕ್‌ ವಿಪಕ್ಷ ನಾಯಕ ಇಮ್ರಾನ್‌ ಖಾನ್‌ ವಿರುದ್ಧ ಆಯೋಗ ನಿಂದನಾ ನೋಟಿಸ್‌ ನೀಡಿ ವಿಚಾರಣೆ ನಡೆಸುತ್ತಿದೆ.
ಇತ್ತೀಚೆಗೆ ಆಯೋಗದ ನಿಷ್ಪಕ್ಷತೆಯನ್ನು ಪ್ರಶ್ನಿಸುವ ಪ್ರಸಂಗ ನಡೆದಿದ್ದವು ಹಾಗೂ ಆಯೋಗ ಮತಯಂತ್ರ ತಿರುಚುತ್ತಿದೆ ಎಂದು ಹಲವು ಪಕ್ಷಗಳು ಆಪಾದಿಸಿದ್ದವು. ಈ ಹಿನ್ನೆಲೆಯಲ್ಲಿ ಇಂಥ ಅಧಿಕಾರವನ್ನು ತನಗೆ ನೀಡುವಂತೆ ಆಯೋಗವು ಸರ್ಕಾರದ ಮೊರೆ ಹೋಗಿದೆ.